ಕೆಲ ರಾಜಕಾರಣಿಗಳು ಈಗಲೂ ನರಬಲಿ ಕೊಡ್ತಾರೆ; ಅಗ್ನಿ ಶ್ರೀಧರ್ ಗಂಭೀರ ಆರೋಪ!
ಬೆಂಗಳೂರು; ರಾಜ್ಯದ ಕೆಲ ರಾಜಕಾರಣಿಗಳು ಈಗಲೂ ಕೂಡಾ ನರಬಲಿ ಕೊಡುತ್ತಾರೆ. ನೇರವಾಗಿ ಅವರೇ ಭಾಗಿಯಾಗದಿದ್ದರೂ ಆ ಕೆಲಸವನ್ನು ಈಗಲೂ ಮಾಡಿಸುತ್ತಾರೆ ಎಂದು ಪತ್ರಕತ್ರ ಹಾಗೂ ಸಿನಿಮಾ ನಿರ್ದೇಶಕ ಅಗ್ನಿಶ್ರೀಧರ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಮಾಕ್ಯದಿಂದ ಕೇರಳದವರೆಗೂ ಈಗಲೂ ನರಬಲಿ ಕೊಡಲಾಗುತ್ತದೆ. ಇದಕ್ಕಾಗಿ ಒಂಟಿ ಹೆಣ್ಣು ಮಕ್ಕಳು ಹಾಗೂ ಭಿಕ್ಷುಕರನ್ನು ಇದಕ್ಕೆ ಬಳಸಿಕೊಳ್ತಾರೆ ಎಂದು ಆರೋಪಿಸಿದ್ದಾರೆ.
ಕೊಲೆ ಆರೋಪಗಳನ್ನು ದಂಡುಪಾಳ್ಯದ ಗ್ಯಾಂಗ್ ಮೇಲೆ ಹೊರಿಸುತ್ತಾರೆ. ಆದ್ರೆ ದಂಡುಪಾಳ್ಯ ಗ್ಯಾಂಗ್ ಆ ಕೊಲೆಗಳನ್ನು ಮಾಡಿಯೇ ಇರಲಿಲ್ಲ. ದಂಡುಪಾಳ್ಯ ಸಿನಿಮಾದಲ್ಲಿ ತೋರಿಸುವ ಅಂಶಗಳು ನಿಜವಾದುವಲ್ಲ. ಕ್ರೀಂ ಸಿನಿಮಾದ ಕಥೆ ನರಬಲಿಗೆ ಸಂಬಂಧಿಸಿದೆ ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ. ಕ್ರೀಂ ಚಿತ್ರದಲ್ಲಿ ಅಗ್ನಿ ಶ್ರೀಧರ್ ನಟನೆ ಕೂಡಾ ಮಾಡಿದ್ದು, ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ.