ಶೀಲ ಶಂಕಿಸಿ 12 ವರ್ಷದಿಂದ ಪತ್ನಿಗೆ ಗೃಹಬಂಧನ; ಮೈಸೂರಲ್ಲಿ ಏನಾಯ್ತು ಗೊತ್ತಾ..?
ಮೈಸೂರು; ಆತನಿಗೆ ಅದು ಮೂರನೇ ಮದುವೆ. ಮೂರನೇ ಹೆಂಡತಿ ಮನೆಗೆ ಬಂದ ವಾರದೊಳಗೇ ಪತ್ನಿ ಮೇಲೆ ಅನುಮಾನ ಮೂಡಿತ್ತು. ಆಕೆಯ ಶೀಲ ಶಂಕಿಸಿದ್ದ ಆತ, ಪತ್ನಿಯನ್ನು 12 ವರ್ಷಗಳಿಂದ ಗೃಹಬಂಧನದಲ್ಲಿರಿಸಿದ್ದ. ಇದೀಗ ಆಕೆಗೆ ಗೃಹಬಂಧನದಿಂದ ಮುಕ್ತಿ ಸಿಕ್ಕಿದೆ. ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ನಡೆದಿರೋದು ಮೈಸೂರು ಜಿಲ್ಲೆ ಹೆಚ್ಡಿ ಕೋಟಿ ತಾಲ್ಲೂಕು ಹೈರಿಗೆ ಗ್ರಾಮದಲ್ಲಿ.
ಗ್ರಾಮದ ಸಣ್ಣಾಲಯ್ಯ ಎಂಬಾತ 12 ವರ್ಷದ ಹಿಂದೆ ಸುಮಾ ಎಂಬಾಕೆಯನ್ನು ಮೂರನೇ ಮದುವೆಯಾಗಿದ್ದ. ಮದುವೆಯಾದ ಕೆಲದಿನಗಳಲ್ಲೇ ಪತ್ನಿ ಶೀಲದ ಅನುಮಾನ ಪಡೋದಕ್ಕೆ ಶುರು ಮಾಡಿದ. ಹೀಗಾಗಿ ಆತ ಆಕೆಯನ್ನು ಮನೆಯ ಒಂದು ಕೊಠಡಿಯಲ್ಲಿ ಬಂಧಿಸಿಟ್ಟಿದ್ದ. ಆಕೆ 12 ವರ್ಷದಿಂದ ಗೃಹ ಬಂಧನದಲ್ಲೇ ಇದ್ದಳು. ಈ ವಿಷಯ ಇದೀಗ ಪೊಲೀಸರಿಗೆ ತಿಳಿದಿದೆ.
ಸ್ಥಳಕ್ಕಾಗಮಿಸಿದ ಹೆಚ್ಡಿ ಕೋಟೆ ಪೊಲೀಸರು ಸುಮಾಳನ್ನು ಬಂಧಮುಕ್ತಗೊಳಿಸಿದ್ದಾರೆ. ಜೊತೆಗೆ ಆರೋಪಿ ಸಣ್ಣಾಲಯ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.