BengaluruPolitics

ಲಕ್ಷ್ಮಣ ಸವದಿಗೂ ಬಿಜೆಪಿ ಗಾಳ; ತವರಿಗೆ ಮರಳ್ತಾರಾ ಮಾಜಿ ಸಚಿವ..?

ನವದೆಹಲಿ; ನಿನ್ನೆಯೇ ಕಾಂಗ್ರೆಸ್‌ ನಾಯಕರಿಗೆ ಜಗದೀಶ್‌ ಶೆಟ್ಟರ್‌ ಪಕ್ಷ ಬಿಡೋದು ಗೊತ್ತಿತ್ತು. ಆದ್ರೆ ಕೊನೆಯ ಕ್ಷಣದವರೆಗೂ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದ್ರೆ ಅದು ಸಫಲವಾಗಲಿಲ್ಲ. ಜಗದೀಶ್‌ ಶೆಟ್ಟರ್‌ ಕೊನೆಗೂ ಬಿಜೆಪಿಗೆ ವಾಪಸ್‌ ಹೋಗಿದ್ದಾರೆ. ಇನ್ನು ಉಳಿದಿರೋದು ಲಕ್ಷ್ಮಣ ಸವದಿ. ಲಕ್ಷ್ಮಣ ಸವದಿಯವರನ್ನು ಕೂಡಾ ಬಿಜೆಪಿಗೆ ವಾಪಸ್‌ ಕರೆಸಿಕೊಳ್ಳಲು ಬಿಜೆಪಿ ನಾಯಕರು ಕಸರತ್ತು ಮಾಡುತ್ತಿದ್ದಾರೆ. ಆದ್ರೆ ಗೊಂದಲದಲ್ಲಿದ್ದ ಸವದಿ, ಶೆಟ್ಟರ್‌ ಸೇರ್ಪಡೆ ನಂತರ ಬಿಜೆಪಿ ಸೇರೋ ಮನಸ್ಸು ಮಾಡಬಹುದು ಎಂದು ಹೇಳಲಾಗುತ್ತಿದೆ.

 ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರನ್ನು ನಿನ್ನೆಯೇ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸಕ್ಕೆ ಕರೆಸಿಕೊಂಡು ಗುಪ್ತವಾಗಿ ಮಾತುಕತೆ ನಡೆಸಿದ್ದರು. ಪಕ್ಷ ಬಿಡದಂತೆ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೂ ಸವದಿ ಅವರು ಸಿಎಂ ಭೇಟಿ ಮಾಡಿದ್ದ ವೇಳೆ ಏನು ಮಾತನಾಡಿದ್ದಾರೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈ ನಡುವೆ ಶೆಟ್ಟರ್‌ ಬಿಜೆಪಿ ಮರುಸೇರ್ಪಡೆಯಾಗಿರುವುದರಿಂದ ಸವದಿ ಕೂಡಾ ವಾಪಸ್‌ ಬಿಜೆಪಿ ಸೇರೋದು ಬಹುತೇಕ ಫಿಕ್ಸ್‌ ಎಂದು ಹೇಳಲಾಗುತ್ತಿದೆ.

ನಿನ್ನೆವರೆಗೂ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರನ್ನ ಪಕ್ಷದಲ್ಲೇ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಕಸರತ್ತು ನಡೆಸಿದ್ದರು. ಆದ್ರೆ ಕೊನೆಗೂ ಒಂದು ವಿಕೆಟ್‌ ಉರುಳಿದೆ. ಮತ್ತೊಂದು ವಿಕೆಟ್‌ ಕೂಡಾ ಉರುಳೋ ಸಾಧ್ಯತೆ ಇದೆ.

ಈಗಾಗಲೇ ಬಿಜೆಪಿ ನಾಯಕರು ಸವದಿ ಅವರನ್ನು ಸಂಪರ್ಕಿಸುತ್ತಿದ್ದಾರೆ. ಮರಳಿ ಪಕ್ಷಕ್ಕೆ ಬರುವಂತೆ ಆಹ್ವಾನಿಸುತ್ತಿದ್ದಾರೆ. ಆದ್ರೆ ಸವದಿ ಏನು ತೀರ್ಮಾನ ಮಾಡುತ್ತಾರೋ ನೋಡಬೇಕು.

 

Share Post