ಪವಿತ್ರಾಗೌಡ ಪೋಸ್ಟ್ ಹಿನ್ನೆಲೆ; ಅತ್ತಿಗೆಯ ಬೆನ್ನಿಗೆ ನಿಂತ ನಟ ದರ್ಶನ್ ಫ್ಯಾನ್ಸ್
ಬೆಂಗಳೂರು; ಪವಿತ್ರಾಗೌಡ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ದರ್ಶನ್ ಜೊತೆಗಿನ ಫೋಟೋಗಳ ಕೊಲಾಜ್ ಹಾಕಿರುವ ಪವಿತ್ರಾಗೌಡ, ನಮ್ಮಿಬ್ಬರ ರಿಲೇಷನ್‌ಶಿಪ್‌ಗೆ 10 ವರ್ಷ ಎಂದು ಬರೆದುಕೊಂಡಿದ್ದಾಳೆ. ಇದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೌಂಟರ್ ಕೊಟ್ಟಿದ್ದಾರೆ. ಇನ್ನು ಇದೇ ವೇಳೆ ದರ್ಶನ್ ಫ್ಯಾನ್ಸ್ ವಿಜಯಲಕ್ಷ್ಮೀಯವರ ಬೆನ್ನಿಗೆ ನಿಂತಿದ್ದಾರೆ. ಅತ್ತಿಗೆ ನಾವು ನಿಮ್ಮ ಪರವಾಗಿ ನಿಲ್ಲುತ್ತೇವೆ ಎಂದು ವಿಜಯಲಕ್ಷ್ಮೀಯವರ ಪೋಸ್ಟ್‌ನಲ್ಲಿ ನೂರಾರು ಕಮೆಂಟ್‌ಗಳನ್ನು ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವಿಜಯಲಕ್ಷ್ಮೀಯವರು ಪವಿತ್ರ ಗೌಡ ಮತ್ತು ಆಕೆಯ ಪತಿ ಸಂಜಯ್ ಸಿಂಗ್ ಜೊತೆಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಎಚ್ಚರಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ. ಆದರೆ ಈ ಪೋಸ್ಟ್ ಅನ್ನು ಕಂಡ ಡಿ ಬಾಸ್ ಫ್ಯಾನ್ಸ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಬೆನ್ನಿಗೆ ನಿಂತಿದ್ದಾರೆ. ಮಾತ್ರವಲ್ಲದೆ ‘ನಿಮ್ಮ ಜೊತೆಗೆ ನಾವಿದ್ದೇವೆ ವಿಜಿ ಅತ್ತಿಗೆ’ ಎಂದು ಕಾಮೆಂಟ್ ಹಾಕಿದ್ದಾರೆ.
ಇದನ್ನು ಕಂಡ ದರ್ಶನ್ ಫ್ಯಾನ್ಸ್ ವಿಜಯಲಕ್ಷ್ಮೀ ಅವರಿಗೆ ಬೆಂಬಲ ಸೂಚಿಸಿದ್ದು, ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ. ಅದರಲ್ಲೊಬ್ಬ ‘ಅತ್ತಿಗೆಯಮ್ಮ ನೀಬು ಏನು ತಲೆ ಕೆಡಿಸಿಕೊಳ್ಳಬೇಡಿ, ನೀವು ಒಂದೇ ಒಂದು ಮಾತು ಹೇಳಿ, ಇನ್ನೊಂದು ಸಲ ಬಾಸ್ ಬಗ್ಗೆ ಪೋಸ್ಟ್ ಹಾಕಬಾರದು ಹಂಗೆ ರಬ್ತೀವಿ ಎಂದು ಬರೆದುಕೊಂಡಿದ್ದಾನೆ. ಮತ್ತೋರ್ವ, ಸೂಪರ್, ಆ ಲೇಡಿ ಚಪ್ಪಲಿ ಏಟು ಕೊಟ್ರಿ ಎಂದು ಬರೆದಿದ್ದಾನೆ.
ಅತ್ತಿಗೆಮ್ಮ ನೀವು ಏನೂ ತಲೆ ಕೆಡಿಸಿಕೊಳ್ಳಬೇಡಿ. ಒಂದೇ ಒಂದು ಮಾತು ಹೇಳಿ ಇನ್ನೊಂದು ಸಲ ಬಾಸ್ ಬಗ್ಗೆ ಪೋಸ್ಟ್ ಹಾಕಬಾರದು ಹಂಗೆ ರುಬ್ತೀವಿ ಅಂತ ಡಿ ಬಾಸ್ ಸೆಲೆಬ್ರಿಟೀಸ್ ಎಂಬ ಅಕೌಂಟ್‌ನಿಂದ ಕಮೆಂಟ್ ಮಾಡಲಾಗಿದೆ. ಸೂಪರ್, ಆ ಹೆಂಗಸಿಗೆ ಚಪ್ಲೀಲಿ ಹೊಡೆದಂತೆ ಹೇಳಿದ್ದೀರಿ ಅಂತ ಲಕ್ಷ್ಮೀ ಕೃಷ್ಣಮೂರ್ತಿ ಬರೆದಿದ್ದಾರೆ. ವಿ ಸಪೋರ್ಟ್ ವಿಜಿ ಅತ್ತಿಗೆ ಎಂದು ರಮ್ಯಾ ಗೌಡ ಅವರು ಬರೆದುಕೊಂಡಿದ್ದಾರೆ. ವಿಜಿ ಅಕ್ಕ ನಿಮಗೆ ನ್ಯಾಯ ಸಿಗಬೇಕು ಅಂದ್ರೆ ದರ್ಶನ್ ಅವರನ್ನು ಜೈಲಿಗೆ ಹಾಕಿಸಿ ಅಂತ ರಾವಣ ಎಂಬುವವರು ಬರೆದುಕೊಂಡಿದ್ದಾರೆ. ಹೀಗೆ ಇಬ್ಬೊಬ್ರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.