ಮಕರ ಸಂಕ್ರಾಂತಿ ಸಂಭ್ರಮ; ಕನ್ನಡದಲ್ಲಿ ಶುಭ ಕೋರಿದ ಪ್ರಧಾನಿ
ಬೆಂಗಳೂರು; ಸಂಕ್ರಾಂತಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ದೇಶದ ಜನಕ್ಕೆ ಶುಭಾಶಯ ಕೋರಿದ್ದಾರೆ. ಟ್ವೀಟ್ ಮಾಡಿರುವ ಅವರು ದೇಶದ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದು ಕನ್ನಡದಲ್ಲಿ ಬರೆದುಕೊಂಡಿದ್ದಾರೆ.
ಪವಿತ್ರ ಸಂಕ್ರಾಂತಿ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿ. ಸುಗ್ಗಿಯ ಕಾಲವು ಸಮೃದ್ಧಿ ಮತ್ತು ಸಂತೋಷದಿಂದ ತುಂಬಲಿ ಎಂದು ಹಾರೈಸುತ್ತೇನೆ. ಮುಂಬರುವ ದಿನಗಳಲ್ಲಿ ನಿಮ್ಮ ಎಲ್ಲಾ ಆಕಾಂಕ್ಷೆಗಳು ಈಡೇರಲಿ.
ಹೀಗಂತ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.