BengaluruDistricts

ಯುವನಿಧಿ ಯೋಜನೆ ಇಂದಿನಿಂದ ಅಧಿಕೃತ ಜಾರಿ; ಯಾರು ಅರ್ಹರು..?, ಅರ್ಜಿ ಸಲ್ಲಿಕೆ ಹೇಗೆ..?

ಶಿವಮೊಗ್ಗ; ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್‌ ಸರ್ಕಾರದ ಐದನೇ ಗ್ಯಾರೆಂಟಿಯಾದ ಯುವನಿಧಿ ಯೋಜನೆ ಇಂದಿನಿಂದ ಅಧಿಕೃತವಾಗಿ ಜಾರಿಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಈ ಯೋಜನೆಗೆ ಕೆಲವೇ ಕ್ಷಣಗಳಲ್ಲಿ ಚಾಲನೆ ಕೊಡಲಿದ್ದಾರೆ. ಈಗಾಗಲೇ ಯುವನಿಧಿ ಯೋಜನೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಆನ್‌ಲೈನ್‌ನಲ್ಲಿ 65 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಈ ಸಾವಿನಲ್ಲಿ ಪದವಿ ಹಾಗೂ ಡಿಪ್ಲೋಮಾ ಸೇರಿ ಒಟ್ಟು 5.29 ಲಕ್ಷ ಫಲಾನುಭವಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿ ಕೆಲಸ ಸಿಗದವರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.

ಯಾರಿಗೆ ಸಿಗುತ್ತೆ ಈ ಯೋಜನೆ..?

====================

ಪದವಿ, ಡಿಪ್ಲೊಮಾ ಮುಗಿಸಿ ಆರು ತಿಂಗಳಾದರೂ ಕೆಲಸ ಸಿಗದವರು

ಪದವಿ ಪಡೆದವರಿಗೆ ಮಾಸಿಕ 3 ಸಾವಿರ, ಡಿಪ್ಲೋಮಾ ಪಡೆದವರಿಗೆ ಮಾಸಿಕ 1500 ರೂಪಾಯಿ

ಎರಡು ವರ್ಷದವರೆಗೂ ಮಾಸಿಕ ಭತ್ಯೆಯನ್ನು ನೀಡಲಾಗುತ್ತದೆ, ಅಷ್ಟರೊಳಗೆ ಕೆಲಸ ಸಿಕ್ಕರೂ ಭತ್ಯೆ ಸಿಗುವುದಿಲ್ಲ

 

ನೋಂದಣಿಗೆ ಯಾವ ದಾಖಲೆ ಬೇಕು..?

========================

  • ಎಸ್​ಎಸ್​ಎಲ್‌​ಸಿ ಅಂಕ ಪಟ್ಟಿ, ಪದವಿ/ಡಿಪ್ಲೋಮಾ ಪ್ರಮಾಣಪತ್ರ
  • ಎಸ್‌ಎಸ್‌ಎಲ್‌ಸಿ ನಂತರ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಡಿಪ್ಲೊಮಾ ಪ್ರಮಾಣಪತ್ರದೊಂದಿಗೆ 8, 9 ಮತ್ತು 10 ನೇ ತರಗತಿ ಅಂಕಪಟ್ಟಿ ಕೊಡಬೇಕು
  • ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಆಧಾರ್-ಲಿಂಕ್ ಮಾಡಿದ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ

ಎಲ್ಲಿ ನೋಂದಣಿ ಮಾಡಿಸಬೇಕು..?

========================
ಸೇವಾಸಿಂಧು ಪೋರ್ಟಲ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಾಯಿಸಬಹುದು

ಪ್ರತಿ ತಿಂಗಳ 25 ನೇ ತಾರೀಖಿನೊಳಗೆ ನೋಂದಾಯಿಸುವ ಅಭ್ಯರ್ಥಿಗಳು ಆ ನಿರ್ದಿಷ್ಟ ತಿಂಗಳಿಗೆ ಹಣವನ್ನು ಪಡೆಯುತ್ತಾರೆ

ತಿಂಗಳ 25 ರ ನಂತರ ಅರ್ಜಿ ಸಲ್ಲಿಸುವವರನ್ನು ಮುಂದಿನ ತಿಂಗಳಿಗೆ ಪರಿಗಣಿಸಲಾಗುತ್ತದೆ

Share Post