ಮಹಿಳೆ ಸ್ನಾನ ಮಾಡುವ ವಿಡಿಯೋ ಚಿತ್ರೀಕರಿಸಿ ಸಿಕ್ಕಿಬಿದ್ದ ಆಸಾಮಿ!
ಹುಬ್ಬಳ್ಳಿ; ಮಹಿಳೆ ಸ್ನಾನ ಮಾಡುತ್ತಿರುವುದನ್ನು ಕದ್ದುಮುಚ್ಚಿ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರೇ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಈ ಘಟನೆ ನಡೆದಿದೆ. ಲಾಡ್ ಸಾಬ್ ಎಂಬಾತನೇ ಸಿಕ್ಕಿಬಿದ್ದಾತ.
ಹುಬ್ಬಳ್ಳಿಯ ಗಣೇಶ ಪೇಟೆ ನಿವಾಸಿಯಾಗಿರುವ ಆರೋಪಿ ಲೋಹಿಯಾ ನಗರದಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಾನೆ. ಈತ ಮನೆಯೊಂದರ ಬಾತ್‌ರೂಮ್ ಕಿಟಕಿಯಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಿಸಲು ಹೋಗಿದ್ದಾನೆ. ಇದು ಸ್ನಾನ ಮಾಡುತ್ತಿದ್ದ ಮಹಿಳೆಗೆ ಗೊತ್ತಾಗಿ ಚೀರಾಡಿದ್ದಾಳೆ. ಕೂಡಲೇ ಸ್ಥಳೀಯರು ಆರೋಪಿಯನ್ನು ಹಿಡಿದಿದ್ದಾರೆ.
ಕ್ಷಣಾರ್ಧದಲ್ಲಿ ವಿಷಯ ಎಲ್ಲರಿಗೂ ಮುಟ್ಟಿದ್ದರಿಂದ ನೂರಾರು ಜನರು ಅಲ್ಲಿ ಸೇರಿದ್ದರು. ಆತನನ್ನು ಕಂಬಕ್ಕೆ ಕಟ್ಟಿದ ಜನರು, ಚೆನ್ನಾಗಿ ಥಳಿಸಿದ್ದಾರೆ. ಅನಂತರ ಹಳೇ ಹುಬ್ಬಳ್ಳಿ ಠಾಣೆಗೆ ಆತನನ್ನು ಒಪ್ಪಿಸಿದ್ದಾರೆ.