BengaluruCrime

ಯುವತಿ ಎದುರು ವ್ಯಕ್ತಿಯ ಅಸಭ್ಯ ವರ್ತನೆ; ಅಂದು ಏನಾಯ್ತು ಗೊತ್ತಾ..?

ಬೆಂಗಳೂರು; ಕಾರಿನಲ್ಲಿ ಕುಳಿತಿದ್ದ ಯುವತಿಯ ಎದುರು ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜನವರಿ 5ರಂದು ಯುವತಿ ಮಹದೇವಪುರ ಪಾರ್ಕ್‌ ಬಳಿ ನಾರು ನಿಲ್ಲಿಸಿ ಅದರಲ್ಲಿ ಕುಳಿತಿದ್ದಳು. ಈ ವೇಳೆ ಕಾರಿನ ಎದುರಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತನೆ ಮಾಡಿದ್ಧಾನೆ.

ಈ ಬಗ್ಗೆ ಯುವತಿ ಟ್ವಟಿರ್‌ನಲ್ಲಿ ಬರೆದುಕೊಂಡಿದ್ದಾಳೆ. ನಾನು ಕಾರಿನಲ್ಲಿ ಕುಳಿತಿದ್ದಾಗ ವ್ಯಕ್ತಿಯೊಬ್ಬ ಬಂದು ಕಾರಿನ ಎದುರು ನಿಂತು ಅಸಭ್ಯವಾಗಿ ವರ್ತನೆ ಮಾಡಿದ. ಇದರಿಂದ ನನಗೆ ತುಂಬಾ ಹೆದರಿಕೆಯಾಯಿತು. ಕೂಡಲೇ ನಾನು ಕಾರಿನ ಡೋರ್‌ ಲಾಕ್‌ ಮಾಡಿಕೊಂಡೆ. ಕಾರಿನ ಸ್ಟಿಯರಿಂಗ್‌ ಕೆಳಗೆ ಅವಿತು ಕುಳಿತೆ ಎಂದು ಯುವತಿ ಬರೆದುಕೊಂಡಿದ್ಧಾಳೆ. ಈ ವೇಳೆ ಆ ಅಪರಿಚತ ವ್ಯಕ್ತಿ ಕಾರಿನ ಸುತ್ತಲೂ ಓಡಾಡಿದ್ದಾನೆ.

 

ಯುವತಿಯ ಸ್ನೇಹಿತರು ಬಂದ ಮೇಲೆ ಕಾರಿನಿಂದ ಯುವತಿ ಕೆಳಗಿಳಿದಳಂತೆ. ನಂತರ ತಾನು ಅನುಭವಿಸಿದ ಯಾತನೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾಳೆ.

 

Share Post