ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ; ಜ.2ರಿಂದ ವ್ಯಾಕ್ಸಿನ್ ಅಭಿಯಾನ
ಬೆಂಗಳೂರು; ಕೇರಳದಲ್ಲಿ ಕೊರೊನಾ ಹೊಸ ರೂಪಾಂತರಿ JN1 ಹೆಚ್ಚು ಸದ್ದು ಮಾಡುತ್ತಿದೆ. ಕರ್ನಾಟಕದಲ್ಲೂ ಇದರ ಹಾವಳಿ ಜಾಸ್ತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ನಿಯಮಗಳನ್ನು ಜಾರಿ ಮಾಡಲಾಗಿದೆ. ಇದರ ನಡುವೆ ಈಗ ಕೊವಿಡ್ ವ್ಯಾಕ್ಸಿನ್ ಅಭಿಯಾನ ಕೂಡಾ ಶುರು ಮಾಡಲಾಗುತ್ತಿದೆ. ರಾಜ್ಯದಲ್ಲಿ ಜನವರಿ 2ರಿಂದ ವ್ಯಾಕ್ಸಿನ್ ಅಭಿಯಾನ ಶುರು ಮಾಡಲು ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ಶೇ.100ರಷ್ಟು ಮೊದಲ ಹಾಗೂ ಎಡರನೇ ಡೋಸ್ ವ್ಯಾಕ್ಸಿನೇಷನ್ ಆಗಿದೆ. ಆದ್ರೆ ಪ್ರಿಕಾಶನರಿ ವ್ಯಾಕ್ಸಿನ್ ಮಾತ್ರ ಶೇ.೨೭ರಷ್ಟು ಆಗಿದೆ. ಇನ್ನೂ ಒಂದೂವರೆ ಕೋಟಿ ಜನ ಈ ಪ್ರಿಕಾಶನರಿ ವ್ಯಾಕ್ಸಿನ್ ಪಡೆಯಲು ಅರ್ಹರಿದ್ದಾರೆ. ಹೀಗಾಗಿ ಈ ಒಂದೂವರೆ ಕೋಟಿ ಜನಕ್ಕೆ ಮೂರನೇ ಡೋಸ್ ವ್ಯಾಕ್ಸಿನ್‌ನನ್ನು ಉಚಿತವಾಗಿ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಇದರ ಭಾಗವಾಗಿ ಆರಂಭದಲ್ಲಿ ಸುಮಾರು 30 ಸಾವಿರ ಕೋರ್ಬಿವಾಕ್ಸ್ ಲಸಿಕೆ ಖರೀದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.