CinemaHealth

ಕೊರೊನಾಗೆ ಖ್ಯಾತ ತಮಿಳು ನಟ ವಿಜಯ್‌ಕಾಂತ್‌ ಬಲಿ!

ಚೆನ್ನೈ; ಖ್ಯಾತ ತಮಿಳು ನಟ ಹಾಗೂ ರಾಜಕಾರಿಣಿ ವಿಜಯ್‌ಕಾಂತ್‌ ಅವರು ಕೊವಿಡ್‌ಗೆ ಬಲಿಯಾಗಿದ್ದಾರೆ. 71 ವರ್ಷ ವಯಸ್ಸಿನ ವಿಜಯ್‌ ಕಾಂತ್‌ಗೆ ಕೊವಿಡ್‌ ಪಾಸಿಟಿವ್‌ ಆಗಿತ್ತು. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ..

ಡಿಎಂಡಿಕೆ ಪಕ್ಷ ಮುಖ್ಯಸ್ಥರೂ ಆಗಿರುವ ಹಿರಿಯನ ವಿಜಯ್‌ಕಾಂತ್‌ ಇಂದು ಬೆಳಗ್ಗೆ ಮೃತಪಟ್ಟರೆಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಮಂಗಳವಾರವಷ್ಟೇ ಅವರನ್ನು ಸಾಮಾನ್ಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಪರೀಕ್ಷೆ ವೇಳೆ ಅವರು ಕೊವಿಡ್‌ ಪಾಸಿಟಿವ್‌ ಆಗಿರುವುದು ದೃಢಪಟ್ಟಿತ್ತು. ಈ ಹಿನ್ನೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವೆಂಬರ್‌ 20ರಂದು ಕೂಡಾ ವಿಜಯ್‌ಕಾಂತ್‌ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ವಿಜಯ್‌ಕಾಂತ್‌ ಅವರು ಹಲವು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದರ ಜೊತೆಗೆ ಅವರಿಗೆ ಕೊವಿಡ್‌ ಪಾಸಿಟಿವ್‌ ಕೂಡಾ ಆಗಿದ್ದರಿಂದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

1952ರಲ್ಲಿ ಮದುರೈನಲ್ಲಿ ಜನಿಸಿದ್ದ ವಿಜಯ್‌ಕಾಂತ್‌ ಅವರು, 80ರ ದಶಕದಲ್ಲಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು, 2009ರ ನಂತರ ಚಿತ್ರರಂಗದಿಂದ ದೂರ ಉಳಿದರು. ಪ್ರೇಮಲತಾ ಅವರನ್ನು 1990ರಲ್ಲಿ ವಿವಾಹವಾದ ವಿಜಯ್‌ಕಾಂತ್‌ಗೆ ಇಬ್ಬರು ಮಕ್ಕಳಿದ್ದಾರೆ.

2005ರಲ್ಲಿ ವಿಜಯಕಾಂತ್ ಅವರು ಡಿಎಂಡಿಕೆ ಎಂಬ ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಎರಡು ಬಾರಿ ಶಾಸಕರಾಗಿದ್ದ ಅವರು, 2011ರಿಂದ 2016ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು.

 

Share Post