Bengaluru

ಹಿಜಾಬ್ ನಿಷೇಧ ವಾಪಸ್ ಪಡೆದಿದ್ದಕ್ಕೆ ಖುಷಿ; ಮತ್ತೆ ಕಾಲೇಜಿಗೆ ಹೋಗ್ತೇನೆ ಎಂದ ಮಂಡ್ಯದ ಮುಸ್ಕಾನ್

 

ಮಂಡ್ಯ; ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ ನಿಷೇಧ ಹೇರಲಾಗಿತ್ತು. ಈ ವೇಳೆ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಿಜಾಬ್ ಧರಿಸಿದ್ದ ಮಂಡ್ಯದ ವಿದ್ಯಾರ್ಥಿನಿ ದಿಟ್ಟತನ ಪ್ರದರ್ಶನ ಮಾಡಿದ್ದಳು. ಇದೀಗ ಅದೇ ವಿದ್ಯಾರ್ಥಿನಿ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾಳೆ. ಮತ್ತೆ ಕಾಲೇಜಿಗೆ ಹೋಗುವ ಆಸಕ್ತಿ ತೋರಿದ್ದಾಳೆ.

 

ಮಂಡ್ಯದ ವಿದ್ಯಾರ್ಥಿನಿ ಬಿ.ಬಿ. ಮುಸ್ಕಾನ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹಮ್ಮದ್​ ಗೆ ಧನ್ಯವಾದ ತಿಳಿಸಿದ್ದಾಳೆ. ಹಾಗಾದರೆ

ಮತ್ತೆ ನಾನು ಕಾಲೇಜ್​​ಗೆ ಹೋಗುತ್ತೇನೆ. ಹಿಜಾಬ್ ಗೆ ನಿಷೇಧ ಹೇರಿದ್ದರಿಂದ ನನ್ನ ಓದು ಅರ್ಧಕ್ಕೆ ನಿಂತಿತ್ತು. ಹಿಜಾಬ್​ ವಾಪಸ್​ ತೆಗೆದುಕೊಂಡಿದ್ದಕ್ಕೆ ತುಂಬಾ ಖುಷಿ ಆಯಿತು ಎಂದಿದ್ದಾಳೆ.

 

ಹಿಜಾಬ್ ನಿಷೇಧ ವಾಪಸ್ ಪಡೆಯುವ ಬಗ್ಗೆ ನನಗೆ ಭರವಸೆ ಇತ್ತು. ಮತ್ತೆ ನಾನು ಓದನ್ನ ಮುಂದುವರೆಸುವೆ. ಕೋರ್ಟ್​ನಲ್ಲಿ ನನಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ​​ ಇದೆ ಎಂದಿದ್ದಾಳೆ‌ ಹಿಜಾಬ್ ನಿಷೇಧದಿಂದಾಗಿ ಯಾರೆಲ್ಲ ವಿದ್ಯಾಭ್ಯಾಸ ಅರ್ಥಕ್ಕೆ ಬಿಟ್ಟಿದ್ದಾರೆ. ಅವರು ವಾಪಸ್​ ಕಾಲೇಜ್​ಗಳಿಗೆ ಬನ್ನಿ ಎಂದು ಆಕೆ ಕರೆ ಕೊಟ್ಟಿದ್ದಾಳೆ.

Share Post