National

ಈ ಕೋಣದ ಬೆಲೆ ಬರೋಬ್ಬರಿ 10 ಕೋಟಿ ರೂಪಾಯಿ..!

ಪಾಟ್ನಾ; ಬಿಹಾರದಲ್ಲಿ ಕ್ಯಾಟಲ್‌ ಎಕ್ಸ್‌ಪೋ ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಭಾಗವಹಿಸಿರುವ ಕೋಣವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಕೋಣ ಆನೆಯಂತಿದ್ದು, ಇದರ ಬೆಲೆ ಬರೋಬ್ಬರಿ ಹತ್ತು ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

ಪಾಟ್ನಾದ ಪಶುವೈದ್ಯಕೀಯ ಮೈದಾನದಲ್ಲಿ ಈ ಎಕ್ಸ್‌ಪೋ ನಡೆಯುತ್ತಿದೆ. ಹರಿಯಾಣದಿಂದ ಬಂದಿರುವ ಮುರ್ರಾ ತಳಿಯ ಭೋಲು ಎಂಬ ಹೆಸರಿನ ಕೋಣ ಎಲ್ಲರನ್ನೂ ಆಕರ್ಷಿಸುತ್ತಿದೆ. ಇದರ ನಿರ್ವಹಣೆಗೆ ಪ್ರತಿ ತಿಂಗಳು 30 ಸಾವಿರ ರೂಪಾಯಿ ಖರ್ಚಾಗುತ್ತದೆ ಎಂದು ಇದರ ಮಾಲೀಕ ಹೇಳಿದ್ದಾನೆ.

 

Share Post