ನಿಗಮ-ಮಂಡಳಿಗಳಿಗೆ ನೇಮಕ ವಿಚಾರ; ಸಿದ್ದು, ಡಿಕೆಶಿ ಕೊಟ್ಟ ಪಟ್ಟಿ ತಿರಸ್ಕರಿಸಿದ ಹೈಕಮಾಂಡ್
ನವದೆಹಲಿ; ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪಟ್ಟಿಯನ್ನು ಅಂತಿಮ ಮಾಡಿಕೊಂಡೇ ಬರುವುದು ಅಂತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿದ್ದರು. ಆದರೆ ಅವರಿಗೆ ನಿರಾಸೆಯಾಗಿದೆ. ಸಿಎಂ ಹಾಗೂ ಡಿಸಿಎಂ ನೀಡಿದ್ದ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕಾರ ಮಾಡಿದೆ.
ನಿನ್ನೆ ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅಂತಿಮ ಮೀಟಿಂಗ್ ಮಾಡಿ ಹೈಕಮಾಂಡ್ಗೆ ಪಟ್ಟಿ ರವಾನಿಸಿದ್ದರು. ಆದ್ರೆ ಮೊದಲ ಪಟ್ಟಿಯಲ್ಲಿ ಕೇವಲ ಶಾಸಕರ ಹೆಸರು ಮಾತ್ರ ಇದ್ದವು. ಇದನ್ನು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಕೇವಲ ಶಾಸಕರಿಗೆ ಮಾತ್ರ ಯಾಕೆ ಸ್ಥಾನಮಾನ ಎಂದು ಪ್ರಶ್ನಿರುವ ರಾಹುಲ್ ಗಾಂಧಿ ಕೆಲ ಕಾರ್ಯಕರ್ತರಿಗೂ ಸ್ಥಾನ ನೀಡುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬರಿಗೈಲಿನಲ್ಲಿ ವಾಪಸ್ಸಾಗಿದ್ದಾರೆ. ಹೈಕಮಾಂಡ್ ಪಟ್ಟಿ ತಡೆಹಿಡಿದ ಹಿನ್ನೆಲೆಯಲ್ಲಿ ಘೋಷಣೆ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.