National

ಅಯೋಧ್ಯೆ ಶ್ರೀರಾಮನಿಗೆ 5 ಸಾವಿರ ವಜ್ರಗಳ ನೆಕ್ಲೇಸ್‌; ಗುಜರಾತ್‌ ವ್ಯಾಪಾರಿಯ ಕೊಡುಗೆ

ಉತ್ತರ ಪ್ರದೇಶ; ಅಯೋಧ್ಯೆಯಲ್ಲಿ ಮುಂದಿನ ತಿಂಗಳು ರಾಮಮಂದಿರ ಲೋಕಾರ್ಪಣೆಯಾಗಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಭಕ್ತರೊಬ್ಬರು ಶ್ರೀರಾಮನಿಗೆ ವಿಶೇಷ ರೀತಿಯ ವಜ್ರದ ನೆಕ್ಲೆಸ್‌ ಅನ್ನು ಸಮರ್ಪಿಸುತ್ತಿದ್ದಾರೆ. ಗುಜರಾತಿನ ವಜ್ರದ ವ್ಯಾಪಾರಿಯೊಬ್ಬರು ಈ ವಜ್ರದ ನೆಕ್ಲೆಸ್‌ ಅನ್ನು ತಯಾರಿ ಮಾಡಿಸಿದ್ದು, ಅದರ ಫೋಟೋಗಳನ್ನು ಈಗ ಎಲ್ಲೆಡೆ ವೈರಲ್‌ ಆಗುತ್ತಿವೆ.

ಅಯೋಧ್ಯೆಯ ರಾಮ ಮಂದಿರ ವಿನ್ಯಾಸವನ್ನು ಹೋಲುವ ವಜ್ರದ ನೆಕ್ಲೇಸ್ ಇದಾಗಿದೆ. 40 ಕುಶಲಕರ್ಮಿಗಳು ಈ ಹಾರವನ್ನು 35 ದಿನಗಳಲ್ಲಿ ವಿನ್ಯಾಸ ಮಾಡಿದ್ದಾರೆ. ವಜ್ರದ ಹಾರ ತಯಾರಿಕೆಗೆ ಒಟ್ಟು 5 ಸಾವಿರ ಅಮೆರಿಕನ್‌ ವಜ್ರಗಳನ್ನು ಬಳಸಲಾಗಿದೆ. ಜೊತೆಗೆ ಇದಕ್ಕೆ 2 ಕೆಜಿ ಬೆಳ್ಳಿ ಬಳಸಲಾಗಿದೆ. ಇದರ ಜೊತೆ ಅಯೋಧ್ಯೆ ದೇಗುಲ ಮಾದರಿ ವಿನ್ಯಾಸಕ್ಕೆ 3 ಸಾವಿರ ವಜ್ರಗಳನ್ನು ಬಳಸಿದ್ದು, ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತನ ಮೂರ್ತಿಗಳು ಕೂಡಾ ಇವೆ.

ವಜ್ರದ ವ್ಯಾಪಾರಿ ಜನವರಿ 22ರಂದು ಅಯೋಧ್ಯೆಯ ದೇವಸ್ಥಾನ ಸಮಿತಿಗೆ ಈ ವಜ್ರದ ಹಾರವನ್ನು ಸಮರ್ಪಿಸಲಿದ್ದಾರೆ ಎಂದು ತಿಳಿದುಬಂದಿದೆ.

Share Post