LifestyleNational

ದಕ್ಷಿಣ ಭಾರತಕ್ಕೆ ಕಡಿಮೆ ಬಡತನ, ಉತ್ತರದಲ್ಲಿ ಬಡತನ ತಾಂಡವ; ಕರ್ನಾಟಕಕ್ಕೆ ಎಷ್ಟನೇ ಸ್ಥಾನ..?

ನವದೆಹಲಿ; ಬಹು ಆಯಾಮದ ಬಡತನದ ಬಗ್ಗೆ ದೇಶದಲ್ಲಿ ಅಧ್ಯಯನ ನಡೆದಿದೆ. ಇದರ ಪ್ರಕಾರ, ದಕ್ಷಿಣ ಭಾರತದಲ್ಲಿ ಬಡತನದ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಆದ್ರೆ ಉತ್ತರ ಭಾರತದಲ್ಲಿ ಬಡತನ ತಾಂಡವವಾಡುತ್ತಿರುವ ಕಂಡುಬಂದಿದೆ. ಬಹು ಆಯಾಮದ ಬಡತನ ಅತಿ ಕಡಿಮೆ ಇರುವ ರಾಜ್ಯ ಕೇರಳ ಎಂದು ವರದಿಯಿಂದ ಬಯಲಾಗಿದೆ. ಬಿಹಾರದಲ್ಲಿ ಅತಿಹೆಚ್ಚು ಬಡತನ ಇದೆ. ಕೇರಳ, ಗೋವಾ, ಪುದುಚೇರಿ ರಾಜ್ಯಗಳಲ್ಲಿ ಶೇ.1ಕ್ಕಿಂತ ಕಡಿಮೆ ಬಡತನ ಇದೆ. ಗೋವಾದಲ್ಲಿ ಶೇ. 0.84 ಮತ್ತು ಪುದುಚೇರಿಯಲ್ಲಿ ಶೇ. 0.85 ಮಾತ್ರವೇ ಎಂಪಿಐ ಇದ್ದರೆ, ದೇಶದ ಒಟ್ಟು ಬಹು ಆಯಾಮದ ಬಡತನ ಶೇ.14.96ರಷ್ಟಿದೆ.

ಬಹು ಆಯಾಮದ ಬಡತನದಲ್ಲಿ ಕರ್ನಾಟಕ 18ನೇ ಸ್ಥಾನದಲ್ಲಿದ್ದು, ಕರ್ನಾಟಕದಲ್ಲಿ ಶೇ. 7.58 ರಷ್ಟು ಬಡತನ ಇದೆ.

ಬಹು ಆಯಾಮ ಬಡತನದ ರಾಜ್ಯವಾರು ಪಟ್ಟಿ
ಬಿಹಾರ: ಶೇ. 33.76
ಜಾರ್ಖಂಡ್: 28.81
ಮೇಘಾಲಯ: 27.79
ಉತ್ತರಪ್ರದೇಶ: 22.93
ಮಧ್ಯಪ್ರದೇಶ: 20.63
ಅಸ್ಸಾಂ: 19.35
ಛತ್ತೀಸ್​ಗಡ: 16.37
ಒಡಿಶಾ: 15.68
ನಾಗಾಲ್ಯಾಂಡ್: 15.43
ರಾಜಸ್ಥಾನ್: 15.31
ಅರುಣಾಚಲಪ್ರದೇಶ: 13.76
ತ್ರಿಪುರ: 13.11
ಪಶ್ಚಿಮ ಬಂಗಾಳ: 11.89
ಗುಜರಾತ್: 11.66
ಉತ್ತರಾಖಂಡ್: 9.67
ಮಣಿಪುರ್: 8.10
ಮಹಾರಾಷ್ಟ್ರ: 7.81
ಕರ್ನಾಟಕ: 7.58
ಹರ್ಯಾಣ: 7.07
ಆಂಧ್ರಪ್ರದೇಶ: 6.06
ತೆಲಂಗಾಣ: 5.88
ಮಿಜೋರಾಂ: 5.30
ಹಿಮಾಚಲಪ್ರದೇಶ: 4.93
ಪಂಜಾಬ್: 4.75
ಸಿಕ್ಕಿಂ: 2.60
ತಮಿಳುನಾಡು: 2.20
ಗೋವಾ: 0.84
ಕೇರಳ: 0.55

 

Share Post