BengaluruCrime

ಪತ್ನಿಯನ್ನೇ ಹನಿಟ್ರ್ಯಾಪ್‌ಗೆ ಇಳಿಸಿದ ಪತಿ; ಉದ್ಯಮಿಯಿಂದ ಪೀಕಿದ್ದೆಷ್ಟು..?

ಬೆಂಗಳೂರು; ಮಾಯಾಂಗನೆಯನ್ನು ಛೂಬಿಟ್ಟು ಶ್ರೀಮಂತರನ್ನು ಬಲೆಗೆ ಬೀಳಿಸೋದು, ನಂತರ ಹೆದರಿಸಿ, ಬೆದರಿಸಿ ಅವರಿಂದ ಹಣ ಕೀಳೋ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಹನಿಟ್ರ್ಯಾಪ್‌ ಅನ್ನೋ ಹೆಸರು ಬೇರೆ ಇಟ್ಟಿದ್ದಾರೆ. ಇಂತಹದ್ದೇ ಒಂದು ಹನಿಟ್ರ್ಯಾಪ್‌ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು, ಉದ್ಯಮಿಗೆ ಸ್ಕೆಚ್‌ ಹಾಕಿದ್ದ ಗ್ಯಾಂಗ್‌ ಸಿಕ್ಕಿಬಿದ್ದಿದೆ.

ಆಸಾಮಿಯನ್ನು ತನ್ನ ಪತ್ನಿಯನ್ನೇ ವಿಧವೆ ಎಂದು ಬಿಂಬಿಸಿ, ಉದ್ಯಮಿ ಜೊತೆ ಆಕೆಯನ್ನು ಬಿಟ್ಟಿದ್ದಾನೆ. ನಂತರ ಹನಿಟ್ರ್ಯಾಪ್‌ ಗೆ ಬೀಳಿಸಿ ಉದ್ಯಮಿಯಿಂದ ಹಣ  ಪೀಕಲು ಮುಂದಾಗಿದ್ದಾರೆ. ಆದ್ರೆ, ಈ ಬಲೆಯಲ್ಲಿ ಆರೋಪಿಗಳೇ ಸಿಕ್ಕಿಬಿದ್ದಿದ್ದಾರೆ. ಸಿಸಿಬಿ ಪೊಲೀಸರು ದಂಪತಿ ಸಹಿತ ನಾಲ್ಕು ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಖಲೀಮ್, ಸಭಾ ದಂಪತಿ ಹಾಗೂ ಇವರಿಗೆ ಸಹಕರಿಸಿದ ಓಬೆದ್ ರಕೀಮ್, ಅತೀಕ್ ಎಂಬುವವರನ್ನು ಬಂಧಿಸಾಗಿದೆ. ಅತಾವುಲ್ಲಾ ಎಂಬ ಉದ್ಯಮಿಯಿಂದ ಹಣ ದೋಚಲು ಪ್ಲ್ಯಾನ್‌ ಮಾಡಿದ್ದ ಖಲೀಮ್‌ ಹಾಗೂ ಸಭಾ ದಂಪತಿ ಇತರ ಇಬ್ಬರ ಸಹಕಾರ ಪಡೆದಿದ್ದರು. ಖಲೀಮ್‌ ತನ್ನ ಪತ್ನಿ ಸಭಾಳನ್ನು ಕರೆದುಕೊಂಡು ಹೋಗಿ ಉದ್ಯಮಿ ಅತಾವುಲ್ಲಾಗೆ ಈಕೆ ವಿಧವೆ ಎಂದು ಪರಿಚಯ ಮಾಡಿಕೊಟ್ಟಿದ್ದ. ಉದ್ಯಮಿ ಜೊತೆಯೇ ಆಕೆಯನ್ನು ಬಿಟ್ಟಿದ್ದ. ಇದೇ ವೇಳೆ ಇಬ್ಬರ ನಡುವೆ ದೈಹಿಕ ಸಂಪರ್ಕ ನಡೆದಿದೆ.

ಅನಂತರ ಕೆಲ ದಿನ ಬಿಟ್ಟು ಆರ್‌ಆರ್‌ ನಗರದಲ್ಲಿ ರೂಮ್‌ ಬುಕ್‌ ಮಾಡೋಣ. ಆಧಾರ್‌ ಕಾರ್ಡ್‌ ಜೊತೆ ಬರುವಂತೆ ಅತಾವುಲ್ಲಾಗೆ ಸಭಾ ಕರೆ ಮಾಡಿದ್ದಾಳೆ. ಆಕೆ ಹೇಳಿದಂತೆ ಅತಾವುಲ್ಲಾ ಆಧಾರ್‌ಕಾರ್ಡ್‌ ಜೊತೆ ಹೋಗಿ ಆರ್‌ಆರ್‌ ನಗರದಲ್ಲಿ ರೂಮ್‌ ಬುಕ್‌ ಮಾಡಿ ಇಬ್ಬರೂ ಒಳಹೋಗಿದ್ದಾರೆ. ಅಷ್ಟರಲ್ಲಿ ಖಲೀಮ್, ರಕೀಬ್, ಅತೀಕ್ ರೂಮ್‌ಗೆ ಎಂಟ್ರಿ ಕೊಟ್ಟು ಉದ್ಯಮಿ ಅತಾವುಲ್ಲಾಗೆ ಬೆದರಿಸಲು ಶುರು ಮಾಡಿದ್ದಾರೆ.

ಆರು ಲಕ್ಷ ರೂಪಾಯಿ ಹಣ ಕೊಡಬೇಕು. ಇಲ್ಲದಿದ್ದರೆ ನಿಮ್ಮ ಮನೆಯವರಿಗೆ ಸುದ್ದಿ ಮುಟ್ಟಿಸುತ್ತೇವೆ ಎಂದು ಧಮಕಿ ಹಾಕಿದ್ದಾರೆ. ಆದ್ರೆ ಈ ಬಗ್ಗೆ ಮಾಹಿತಿ ಅರಿತಿದ್ದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳನ್ನು ರೆಡ್‌ ಹ್ಯಾಂಡಾಗಿ ಹಿಡಿದಿದ್ದಾರೆ. ಈ ಬಗ್ಗೆ ಆರ್‌ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

 

Share Post