ಹಿರಿಯ ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳ; ಬೇಸತ್ತ ನ್ಯಾಯಾಧೀಶೆಯಿಂದ ಸಿಜೆಐಗೆ ಪತ್ರ
ನವದೆಹಲಿ; ನ್ಯಾಯಾಧೀಶರು ನ್ಯಾಯ ನೀಡುವವರು ಅವರಿಗೇ ತೊಂದರೆಯಾದರೆ ಯಾರಿಗೆ ದೂರು ಕೊಡೋದು. ನ್ಯಾಯ ಹೇಳುವ ನ್ಯಾಯಾಧೀಶರೇ ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ಕೊಡೋರು ಯಾರು..? ಈ ಸುದ್ದಿ ನೋಡಿದರೆ ಈ ಪ್ರಶ್ನೆ ಹುಟ್ಟದೇ ಇರಲಾರವು. ಯಾಕಂದ್ರೆ ಇಲ್ಲಿ ತಪ್ಪು ಮಾಡಿದವರೂ ನ್ಯಾಯಾಧೀಶರೇ, ಸಂತ್ರಸ್ತರೂ ನ್ಯಾಯಾಧೀಶರೇ..
ಹೌದು, ಉತ್ತರ ಪ್ರದೇಶದ ನ್ಯಾಯಾಧೀಶೆಯೊಬ್ಬರು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ಜೀವನ ಸಾಕೆನಿಸಿದೆ. ನನಗೆ ಸಾಯಲು ಅನುಮತಿ ಕೊಡಿ ಎಂದು ಕೇಳೀಕೊಂಡಿದ್ದಾರೆ. ಇದಕ್ಕೆ ಕಾರಣ ಹಿರಿಯ ನ್ಯಾಯಾಧೀಶರ ಲೈಂಗಿಕ ಕಿರುಕುಳ. ನನಗೆ ಹಿರಿಯ ನ್ಯಾಯಾಧೀಶರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದಾಗಿ ನಾನು ತುಂಬಾ ಬೇಸತ್ತಿದ್ದೇನೆ ಎಂದು ನ್ಯಾಯಾಧೀಶೆ ಗೋಳುತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನನ್ನ ಜೀವನ ಕೊನೆಗೊಳಿಕೊಳ್ಳಬೇಕು ಎಂದುಕೊಂಡಿದ್ದೇನೆ. ದಯವಿಟ್ಟು ಅದಕ್ಕೆ ಅನುಮತಿ ಕೊಡಿ ಎಂದು ಪತ್ರದಲ್ಲಿ ಬರೆಯಲಾಗಿದೆ. ಜಿಲ್ಲಾ ನ್ಯಾಯಾಧೀಶರು ಮತ್ತು ಅವರ ಸಹಚರರು ಲೈಂಗಿಕ ಕಿರುಕುಳ ನೀಡ್ತಿದ್ದಾರೆ. ನನ್ನನ್ನು ಅವರು ಕಸದಂತೆ ನೋಡ್ತಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ವಿಚಾರ ಸಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಪ್ರಕರಣ ಸಂಬಂಧ ವರದಿ ಕೇಳಿದ್ದಾರೆ ಎನ್ನಲಾಗಿದೆ.