NationalPolitics

ನಾರಾ ಲೋಕೇಶ್‌ ವಿರುದ್ಧ ಗೆದ್ದಿದ್ದ ಶಾಸಕ ಅಲ್ಲಾ ರಾಮಕೃಷ್ಣ ರಾಜೀನಾಮೆ

ಆಂಧ್ರಪ್ರದೇಶ; ಮಂಗಳಗಿರಿ ವೈಸಿಪಿ ಶಾಸಕ ಅಲ್ಲಾ ರಾಮಕೃಷ್ಣ ರೆಡ್ಡಿ (ಆರ್‌ಕೆ) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಮಾದರಿಯಲ್ಲಿ ವಿಧಾನಸಭೆ ಕಾರ್ಯದರ್ಶಿಗೆ ಕಳುಹಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ನಾರಾ ಲೋಕೇಶ್ ವಿರುದ್ಧ ಅಲ್ಲಾ ರಾಮಕೃಷ್ಣ ರೆಡ್ಡಿ ಗೆಲುವು ಸಾಧಿಸಿದ್ದರು.
  ವೈಎಸ್‌ಆರ್‌ಸಿಪಿ ಕಚೇರಿ ಮಂಗಳಗಿರಿಯಲ್ಲಿ ಭಾನುವಾರ ಆರಂಭವಾಗಿದೆ. ಅಲ್ಲಾ ರಾಮಕೃಷ್ಣಾ ರೆಡ್ಡಿಯವರನ್ನು ಸಂಪರ್ಕ ಮಾಡದೇ, ಅವರನ್ನು ಆಹ್ವಾನಿಸದೇ ಪಕ್ಷದ ಕಚೇರಿ ತೆರೆದಿರುವುದು ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಇದಾದ ಕೆಲವೇ ಗಂಟೆಗಳಲ್ಲಿ ಆರ್‌ಕೆ ರಾಜೀನಾಮೆ ಸಲ್ಲಿಸಿರುವುದು ಪ್ರಮುಖ ಬೆಳವಣಿಗೆಯಾಗಿದೆ.
 ಆರ್‌ಕೆ ಕೆಲ ದಿನಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಮುಖ್ಯಸ್ಥರ ಆದೇಶದ ಹೊರತಾಗಿಯೂ ಅವರು ಕಾರ್ಯಕ್ರಮಗಳನ್ನು ಆಯೋಜಿಸಲಿಲ್ಲ. ಇದೇ ವೇಳೆ ಅವರ ವಿರುದ್ಧ ಈ ಹಿಂದೆ ಸ್ಪರ್ಧಿಸಿ ಸೋತಿದ್ದ ಗಂಜಿ ಚಿರಂಜೀವಿ ಆಡಳಿತ ಪಕ್ಷದಲ್ಲಿ ಮಹತ್ವ ಪಡೆಯುತ್ತಿದ್ದಾರೆ. ಚಿರಂಜೀವಿ ನೇತೃತ್ವದಲ್ಲಿ ವೈಎಸ್‌ಆರ್‌ಸಿಪಿ ಮಂಗಳಗಿರಿ ಕ್ಷೇತ್ರದ ಕಚೇರಿಯನ್ನೂ ಆರಂಭ ಮಾಡಲಾಗಿದೆ.
Share Post