CrimeDistricts

ಭ್ರೂಣಲಿಂಗ ಪತ್ತೆ ಪ್ರಕರಣ; ಮಾತಾ ಆಸ್ಪತ್ರೆ ವಿದ್ಯುತ್‌ ಕಟ್‌!

ಮೈಸೂರು; ಭ್ರೂಣಲಿಂಗ ಪತ್ತೆ ಹಾಗೂ ಅಕ್ರಮ ಗರ್ಭಪಾತ ಪ್ರಕರಣ ಸಂಬಂಧ ಆರೋಪ ಎದುರಿಸುತ್ತಿರುವ ಮೈಸೂರಿನ ಮಾತಾ ಆಸ್ಪತ್ರೆಯ ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.  4 ತಿಂಗಳಿಂದ ಮಾತಾ ಆಸ್ಪತ್ರೆ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಬರೋಬ್ಬರಿ 20 ಸಾವಿರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿತ್ತು. ಇದರಿಂದಾಗಿ ಚೆಸ್ಕಾಂ ಸಿಬ್ಬಂದಿ ಮಾತಾ ಆಸ್ಪತ್ರೆ ಕರೆಂಟ್​ ಕನೆಕ್ಷನ್‌ ಕಟ್ ಮಾಡಿದ್ದಾರೆ.

ಮಂಡ್ಯದ ಆಲೆಮನೆಯಲ್ಲಿ ಗರ್ಭದ ಸ್ಕ್ಯಾನಿಂಗ್‌ ಮಾಡಿ ಲಿಂಗಪತ್ತೆ ಮಾಡುತ್ತಿದ್ದ ಕಿರಾತಕರು, ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ಭ್ರೂಣಹತ್ಯೆ ಮಾಡುತ್ತಿದ್ದರು. ಇದು ದೊಡ್ಡ ಮಟ್ಟದ ದಂಧೆಯಾಗಿದ್ದು, ಆಸ್ಪತ್ರೆ ವಿರುದ್ಧ ದೂರುಗಳು ಕೇಳಿಬರುತ್ತಿವೆ. ಹೀಗಿರುವಾಗಲೇ ಚೆಸ್ಕಾಂ ಅಧಿಕಾರಿಗಳು ಆಸ್ಪತ್ರೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.

 

Share Post