NationalPolitics

ತೆಲಂಗಾಣ ಚುನಾವಣೆ; ಮತದಾನಕ್ಕೂ ಮೊದಲು ರೇವಂತ್‌ ರೆಡ್ಡಿ ಗೋ ಪೂಜೆ

ಹೈದರಾಬಾದ್‌; ತೆಲಂಗಾಣದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಬೆಳಗ್ಗೆ ಹೈದರಾಬಾದ್‌ ಸೇರಿ ಹಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ರೆ ಸಮಯ ಕಳೆದಂತೆ ಮತಗಟ್ಟೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಎಲ್ಲರೂ ಬಂದು ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂದಿ ಕರೆ ಕೊಟ್ಟಿದ್ದಾರೆ.

ಪ್ರಧಾನಿ ಮೋದಿಯವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನ ಮಾಡಬೇಕೆಂದು ಕರೆ ನೀಡಿದ್ದಾರೆ. ಇತ್ತ ರಾಹುಲ್‌ ಗಾಂಧಿ ತೆಲುಗಿನಲ್ಲೇ ಟ್ವೀಟ್‌ ಮಾಡಿದ್ದು, ಸರ್ವಾಧಿಕಾರಿಗಳ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಜನಸಾಮಾನ್ಯರು ಗೆಲ್ಲಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದಿದ್ದಾರೆ.

ಇದೇ ವೇಳೆ ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಮತದಾನದ ಹಕ್ಕನ್ನು ಚಲಾಯಿಸಿದರು. ರೇವಂತ್ ರೆಡ್ಡಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಕೊಡಂಗಲ್ಲೊದಲ್ಲಿರುವ ZPHS ಬಾಲಕರ ದಕ್ಷಿಣ ವಿಭಾಗದ ಮತಗಟ್ಟೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದರು. ಮತದಾನಕ್ಕೂ ಮುನ್ನ ಕೊಡಂಗಲ್ ನಿವಾಸದಲ್ಲಿ ನಡೆದ ಗೋಪೂಜೆ ಕಾರ್ಯಕ್ರಮದಲ್ಲಿ ರೇವಂತ್ ರೆಡ್ಡಿ ಭಾಗವಹಿಸಿದ್ದರು.

ತದನಂತರ ಮತದಾನದ ಹಕ್ಕನ್ನು ಚಲಾಯಿಸಿದರು. ರೇವಂತ್ ರೆಡ್ಡಿ ಮಾತನಾಡಿ, ತೆಲಂಗಾಣ ಜನತೆಗೆ ಸಮಯಪ್ರಜ್ಞೆ ಇದ್ದು, ತೆಲಂಗಾಣ ರಾಜ್ಯದಲ್ಲಿ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಾದರೆ ಜನತೆಗೆ ಒಪ್ಪಿಗೆಯಾಗುವ ಸರಕಾರ ಬರಬೇಕು. ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ರೇವಂತ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ತೆಲಂಗಾಣ ರಾಜ್ಯದ ಜನತೆ ಯಾವುದೇ ಪಿತೂರಿಗಳಿಗೆ ಮಣಿಯದೆ ಮತದಾನದ ಹಕ್ಕನ್ನು ಚಲಾಯಿಸುವಂತೆ ರೇವಂತ್ ರೆಡ್ಡಿ ಮನವಿ ಮಾಡಿದರು.

Share Post