ಒತ್ತೆಯಾಳುಗಳ ಮೊದಲ ಬ್ಯಾಚ್ ಬಿಡುಗಡೆ ಮಾಡಿದ ಹಮಾಸ್
ಟೆಲ್ ಅವೀವ್; ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡುವ ವೇಳೆ ಹಲವು ಇಸ್ರೇಲಿಗರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಅದರಲ್ಲಿ ಮೊದಲ ಬ್ಯಾಚ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಗಾಜಾದಲ್ಲಿ ತಾತ್ಕಾಲಿಕ ಕದನ ವಿರಾಮ ಇದ್ದು, ಇಂದು ಹಮಾಸ್ ಉಗ್ರರು 24 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ.
ಬಿಡುಗಡೆಯಾದ ಒತ್ತೆಯಾಳುಗಳು ತಮ್ಮ ಕುಟುಂಬ ಸೇರುವ ಮೊದಲು ಅವರನ್ನು ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಅನಂತರ ಅವರನ್ನು ಮನೆಗಳಿಗೆ ಕಳುಹಿಸಲಾಗುತ್ತದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಹಮಾಸ್ ಬಂಡುಕೋರರ ಕಪಿಮುಷ್ಠಿಯಿಂದ ಬಿಡುಗಡೆಯಾದವರು ಪೈಕಿ ನಾಲ್ವರು ಮಕ್ಕಳು ಮತ್ತು ಆರು ವೃದ್ಧ ಮಹಿಳೆಯರಿದ್ದಾರೆ.