HealthNational

ಜಿಮ್‌ ಮಾಡುತ್ತಿದ್ದಾಗ ಲೇಡಿ ಡಾಕ್ಟರ್‌ಗೆ ಹಠಾತ್‌ ಹೃದಯಾಘಾತ!

ಚೆನ್ನೈ; ಇತ್ತೀಚೆಗೆ ವ್ಯಾಯಾಮ ಮಾಡುತ್ತಿದ್ದಾಗ ಹಠಾತ್‌ ಹೃದಯಾಘಾತವಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಚೆನ್ನೈನಲ್ಲಿ ಯುವ ಲೇಡಿ ಡಾಕ್ಟರ್‌ ಒಬ್ಬರು ಜಿಮ್‌ ಮಾಡುತ್ತಲೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ದೇಹದ ತೂಕ ಇಳಿಸಲೆಂದು ಅವರು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದಾಗ ಹಠಾತ್‌ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಚೆನ್ನೈನ ಕಿಲ್ಪಾಕ್ಕಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಮುಗಿಸಿರುವ 26 ವರ್ಷದ ಅನ್ವಿತಾ ಅವರೇ ಸಾವನ್ನಪ್ಪಿರುವ ವೈದ್ಯೆ. ಇವರು ಖ್ಯಾತ ನೇತ್ರಶಾಸ್ತ್ರಜ್ಞರ ಪುತ್ರಿಯಾಗಿದ್ದು, ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು.

ಇಂದು ಬೆಳಗ್ಗೆ ಅನ್ವಿತಾ ಅವರು ಕಿಲ್ಪಾಕ್ಕಂನ ನ್ಯೂ ಅವಡಿ ರಸ್ತೆಯಲ್ಲಿರುವ ಖಾಸಗಿ ಫಿಟ್‌ನೆಸ್ ಸೆಂಟರ್‌ನಲ್ಲಿ ಜಿಮ್‌ ಮಾಡುತ್ತಿದ್ದರು. ಈ ವೇಳೆ ಕುಸಿದುಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

 

Share Post