CinemaHealth

ಕಂಗುವ ಚಿತ್ರದ ಶೂಟಿಂಗ್‌ ವೇಳೆ ತೀವ್ರ ಗಾಯ; ತಮಿಳು ನಟ ಸೂರ್ಯ ಆಸ್ಪತ್ರೆಗೆ ದಾಖಲು!

ಚೆನ್ನೈ; ಕಂಗುವ ಚಿತ್ರದ ಶೂಟಿಂಗ್‌ ವೇಳೆ ಖ್ಯಾತ ನಟ ಸೂರ್ಯಗೆ ತೀವ್ರ ಗಾಯಗಳಾಗಿವೆ. ಸೂರ್ಯ ಅವರ ಭುಜದ ಮೇಲೆ ಕ್ಯಾರಾ ಬಿದ್ದಿದ್ದರಿಂದ ಈ ದುರ್ಘಟನೆ ನಡೆದಿದೆ. ಸೂರ್ಯ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಸೂರ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನು ಸೂರ್ಯ ಕೂಡಾ ಖಚಿತಪಡಿಸಿದ್ದು, ನಾನು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಟ್ವಟಿರ್‌ನಲ್ಲಿ ಬರೆದುಕೊಂಡಿದ್ದಾರೆ. 

‘ಕಂಗುವ’ ಸಿನಿಮಾ ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಜೊತೆಗೆ 3 ಡಿ ತಂತ್ರಜ್ಞಾನದಲ್ಲೂ ಈ ಸಿನಿಮಾವನ್ನು ನೋಡಬಹುದಾಗಿದೆ ಎಂದು ತಿಳಿದುಬಂದಿದೆ.

Share Post