CrimeDistricts

ಪೊಲೀಸ್‌ ಠಾಣೆಯಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ!

ಹಾಸನ; ದೂರು ಕೊಡಲು ಹೋಗಿದ್ದ ಪತ್ನಿಗೆ ಪಾಪಿ ಪತಿಯೊಬ್ಬರು ಪೊಲೀಸರ ಮುಂದೆಯೇ ಚಾಕುವಿನಿಂದ ಇರಿದಿದ್ದಾರೆ. ಹಾಸನದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಶಿಲ್ಪ ಎಂಬಾಕೆ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ಹರೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರು ವರ್ಷಗಳ ಹಿಂದೆ ಶಿಲ್ಪಾ ಹಾಗೂ ಹರೀಶ್‌ ಮದುವೆಯಾಗಿತ್ತು. ಆದ್ರೆ ಇಬ್ಬರಿಗೂ ಪರಸ್ಪರ ಅನುಮಾನಗಳಿದ್ದಿದ್ದರಿಂದ ಇಬ್ಬರೂ ಯಾವಾಗಲೂ ಜಗಳವಾಡುತ್ತಿದ್ದರು. ಈ ಕಾರಣಕ್ಕಾಗಿಯೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಗಂಡನ ಕಿರುಕುಳದಿಂದಾಗಿ ಶಿಲ್ಪಾ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಲು ಹೋಗಿದ್ದಳು. ಈ ವೇಳೆ ಪೊಲೀಸರು ಪತಿ ಹರೀಶ್‌ನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಚಾಕು ಹೊರತೆಗೆದ ಹರೀಶ್‌ ಪತ್ನಿಗೆ ಇರಿದಿದ್ದಾನೆ.

ಪೊಲೀಸರು ಕೂಡಲೇ ಆತನಿಂದ ಚಾಕು ಕಿತ್ತುಕೊಂಡಿದ್ದಾರೆ. ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

 

Share Post