Bengaluru

ಹಸಿರು ಪಟಾಕಿ ಮಾತ್ರ ಬಳಸಬೇಕು; ಈ ಸಮಯದಲ್ಲಿ ಮಾತ್ರ ಸಿಡಿಸಬೇಕು!

ಬೆಂಗಳೂರು; ಬೆಂಗಳೂರು ನಗರದಲ್ಲಿ ಹಸಿರು ಪಟಾಕಿ ಮಾತ್ರ ಸಿಡಿಸೋದಕ್ಕೆ ಅವಕಾಶವಿದೆಯಂತೆ. ಅದೂ ಕೂಡಾ ಕೊಟ್ಟಿರುವ ಸಮಯದಲ್ಲೇ ಪಟಾಕಿ ಸಿಡಿಸಬೇಕು. ಬೇರೆ ಸಮಯದಲ್ಲಿ ಪಟಾಕಿ ಸಿಡಿಸಿದರೆ ಕ್ರಮ ತೆಗೆದುಕೊಳ್ಳಲಾಗುತ್ತೆ ಅಂತ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಸುಪ್ರೀಂ ಆದೇಶದಂತೆ ಹಸಿರು ಪಟಾಕಿ ಮಾತ್ರ ಬಳಸಬೇಕು. ರಾತ್ರಿ 8 ಗಂಟೆಯಿಂದ 10 ಗಂಟೆಯೊಳಗೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ಹೇಳಿದರು. ಹಸಿರು ಪಾಟಕಿಗಳ ಮೇಲೆ ಕ್ಯೂ ಆರ್ ಕೋಡ್ ಇರತ್ತೆ ಅದನ್ನು ಸ್ಲ್ಯಾನ್ ಮಾಡುವ ಮೂಲಕ ಸಾರ್ವಜನಿಕರು ಅದನ್ನು ಪತ್ತೆ ಮಾಡಬಹುದು.

ಅಗ್ನಿಶಾಮಕ ಇಲಾಖೆ ಮೂಲಕ ಮಾಹಿತಿ ಪಡೆದು ಪಟಾಕಿ ಮಾರಾಟಕ್ಕೆ ಲೈಸೆನ್ಸ್​ ನೀಡಲಾಗಿದೆ. ಬೆಂಗಳೂರಿನಲ್ಲಿ ಎಲ್ಲಿ ಮಳಿಗೆ ಮಾಡಬೇಕು ಎಂದು ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು ಎಂದು ಅವರು ಹೇಳಿದರು.

 

Share Post