CrimeDistricts

ಸಬ್‌ ಇನ್ಸ್‌ಪೆಕ್ಟರ್‌ ಮುಂದೆಯೇ ಡ್ರ್ಯಾಗರ್‌ ಪ್ರದರ್ಶಿಸಿದ ಪುಡಿ ರೌಡಿ

ತುಮಕೂರು; ಪುಡಿ ರೌಡಿಯೊಬ್ಬ ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌ ಎದುರೇ ಡ್ರ್ಯಾಗರ್‌ ಹಿಡಿದು ಪುಂಡಾಟ ಪ್ರದರ್ಶಿಸಿದ್ದಾನೆ. ತುಮಕೂರಿನ ಖಾಸಗಿ ಬಸ್‌ ನಿಲ್ದಾಣದ ಬಳಿ ಡ್ಯ್ರಾಗರ್‌ ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ಪುಡಿ ರೌಡಿಯನ್ನು ಕೊನೆಗೂ ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಮಧು ಅಲಿಯಾಸ್‌ ಮೋಜ ಎಂದು ಗುರುತಿಸಲಾಗಿದೆ. ಆರೋಪಿ ಮೋಜ ಡ್ರ್ಯಾಗರ್‌  ಹಿಡಿದು ಜನರನ್ನು ಬೆದರಿಸಿ ಮೊಬೈಲ್‌ ಕಿತ್ತುಕೊಳ್ಳುತ್ತಿದ್ದ. ಈ ಮಾಹಿತಿ ಅರಿತ ಮಹಿಳಾ ಎಸ್‌ಐ ಮಂಗಳಮ್ಮ ಸ್ಥಳಕ್ಕೆ ಹೋಗಿದ್ದಾರೆ. ಆಗಲೂ ಆತ ಪುಂಡಾಟ ಮೆರೆದಿದ್ದಾನೆ.

ಹೀಗಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಇತ್ತೀಚೆಗೆ ಬೇಲ್‌ ಮೇಲೆ ಆಚೆ ಬಂದಿದ್ದ ಎಂದು ತಿಳಿದುಬಂದಿದೆ.

Share Post