CrimeDistricts

ವಿದ್ಯಾರ್ಥಿನಿಗೆ ಆಸಿಡ್‌ ಎರಚಿದ ಶಿಕ್ಷಕ; ಮುಂದೇನಾಯ್ತು..?

ಚಿತ್ರದುರ್ಗ; ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಒಡೆದು ಶಿಕ್ಷೆ ನೀಡುವುದಕ್ಕೆ ಈಗ ಆಸ್ಪದವಿಲ್ಲ. ಆದರೂ, ಸಣ್ಣ ಪುಟ್ಟ ಶಿಕ್ಷೆ ಕೊಟ್ಟರೆ ತೊಂದರೆ ಇಲ್ಲ. ಆದ್ರೆ ಕೆಲ ಶಿಕ್ಷಕರು ತಮ್ಮ ರಾಕ್ಷಸಿ ವರ್ತನೆ ತೋರುತ್ತಾರೆ. ಅದೇ ರೀತಿ ಇಲ್ಲೊಬ್ಬ ಮುಖ್ಯ ಶಿಕ್ಷಕ ವಿದ್ಯಾರ್ಥಿನಿ ಮೇಲೆ ಆಸಿಡ್‌ ಎರಚಿ ಗಾಯಗೊಳಿಸಿದ್ದಾರೆ. ಇದರಿಂದಾಗಿ ಅವರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಇಲ್ಲಿನ ಜೋಡಿ ಚಿಕ್ಕೇನಹಳ್ಳಿಯ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ರಂಗಸ್ವಾಮಿಯೇ ಅಮಾನತಾದವರು. ಚಿತ್ರದುರ್ಗ DDPI ರವಿಶಂಕರರೆಡ್ಡಿ ಈ ಆದೇಶ ಹೊರಡಿಸಿದ್ದಾರೆ.  ರಂಗಸ್ವಾಮಿ ಅವರು ವಿದ್ಯಾರ್ಥಿ ಮೇಲೆ ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ವಿದ್ಯಾರ್ಥಿನಿ ಮೇಲೆ ಎರಚಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮುಖ್ಯಶಿಕ್ಷಕನ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ  ಕೇಸ್ ಕೂಡಾ ದಾಖಲಾಗಿದೆ.

ದಸರಾ ರಜೆ ಮುಗಿಸಿ ಬಂದ ವಿದ್ಯಾರ್ಥಿಗಳಿಗೆ ಅಕ್ಟೋಬರ್‌ 25ರಂದು ಮುಖ್ಯಶಿಕ್ಷಕ ರಂಗಸ್ವಾಮಿ ಶೌಚಾಲಯ ತೊಳೆಯುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಎರಡನೇ ತರಗತಿ ವಿದ್ಯಾರ್ಥನಿ ಸಿಂಚನಾ ಅದನ್ನು ನೋಡಲೆಂದು ಶೌಚಾಲಯದ ಬಳಿ ಹೋಗಿದ್ದಾಳೆ. ಇದರಿಂದ ಕೋಪಗೊಂಡ ಶಿಕ್ಷಕ ರಂಗಸ್ವಾಮಿ, ಶೌಚಾಲಯ ತೊಳೆಯಲು ಇರಿಸಿದ್ದ ಆಸಿಡ್‌ನ್ನು ತೆಗೆದುಕೊಂಡು ಆಕೆಯ ಮೇಲೆ ಎರಚಿದ್ದಾರೆ. ಇದರಿಂದಾಗಿ ಸಿಂಚನಾಳ ಬೆನ್ನಿಗೆ ಗಾಯವಾಗಿದೆ.

 

Share Post