ಊಟಕ್ಕಾಗಿ ಜಗಳ; ಬೆಂಕಿ ಹಚ್ಚಿ ಹೆತ್ತ ತಾಯಿಯನ್ನೇ ಕೊಂದ ಪಾಪಿ
ರಾಯಗಢ; ಊಟದ ವಿಚಾರಕ್ಕೆ ತಾಯಿ ಹಾಗೂ ಮಗನ ನಡುವೆ ಜಗಳ ನಡೆದಿದ್ದು, ಅದು ತಾರಕಕ್ಕೇರಿ ಸ್ವಂತ ಮಗನೇ ತಾಯಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಮಹಾರಾಷ್ಟ್ರದ ರಾಯಗಢದಲ್ಲಿ ಇಂತಹ ದಾರುಣ ಘಟನೆ ನಡೆದಿದೆ.
ರಾಯಗಢಕ್ಕೆ ಸಮೀಪದ ನವಖರ್ ಎಂಬ ಗ್ರಾಮದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಚುಂಗುನಾ ಎಂಬಾಕೆಯೇ ಮಗನಿಂದ ಕೊಲೆಯಾದ ದುರ್ದೈವಿಯಾಗಿದ್ದಾಳೆ. ಊಟ ತಯಾರಿಸಿ ಬಡಿಸುವ ವಿಚಾರದಲ್ಲಿ ಮಗ ಜಯೇಶ್‌ನೊಂದಿಗೆ ಜಗಳವಾಗಿದೆ. ಈ ವೇಳೆ ತಾಯಿಯ ಮೇಲೆ ಜಯೇಶ್ ಹಲ್ಲೆ ನಡೆಸಿದ್ದಾನೆ. ನಂತರ ಆಕೆಗೆ ಬೆಂಕಿ ಹಚ್ಚಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಆ ಮಹಿಳೆನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ