BengaluruCrime

ಚೋಳರಪಾಳ್ಯದ ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ಬೆಂಗಳೂರು; ಇತ್ತೀಚೆಗಷ್ಟೇ ಅತ್ತಿಬೆಲೆಯಲ್ಲಿ ಪಟಾಕಿ ದುರಂತ ನಡೆದು 14 ಮಂದಿ ಜೀವತೆತ್ತಿದ್ದರು. ಹೀಗಿರುವಾಗಲೇ ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ನಡೆದಿದೆ. ಈ ಬಾರಿ ಅಗರಬತ್ತಿ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಗುಡಿಕೈಗಾರಿಕೆ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ. ರವಿಕುಮಾರ್‌ ಎಂಬುವವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಚೋಳರಪಾಳ್ಯದ ವಸತಿ ಪ್ರದೇಶದಲ್ಲಿಯೇ ಈ ಗುಡಿಕೈಗಾರಿಕೆ ನಡೆಸಲಾಗುತ್ತಿತ್ತು. ಕಳೆದ ಐದು ವರ್ಷಗಳಿಂದ ಈ ಕಾರ್ಖಾನೆ ನಡೆಯುತ್ತಿತ್ತು. ಮನೆಯ ಗ್ರೌಂಡ್‌ಫ್ಲೋರ್‌ನಲ್ಲಿ ಅಗರಮತ್ತಿ ತಯಾರಿಕೆಗೆ ಬೇಕಾದ ಲಿಕ್ವಿಡ್‌ ರಾಸಾಯನಿಕಗಳನ್ನು ಶೇಖರಣೆ ಮಾಡಲಾಗಿತ್ತು.

ಈ ರಾಸಾಯನಿಕಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇನ್ನು ಬೆಂಕಿ ಹೊರಗಡೆಗೂ ಚಾಚಿದ್ದು, ಮನೆ ಮುಂದೆ ನಿಲ್ಲಿಸಿದ್ದ ಎಂಟು ಬೈಕ್‌ಗಳು ಕೂಡಾ ಭಸ್ಮವಾಗಿವೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಈ ದುರ್ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

Share Post