BengaluruHealth

ದಕ್ಷಿಣ ಆಫ್ರಿಕಾದಿಂದ ಬಂದ ಹಲವರು ನಾಪತ್ತೆ; ಬಿಬಿಎಂಪಿಗೆ ತಲೆಬಿಸಿ

ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಒಮಿಕ್ರಾನ್‌ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿರುವ ಪ್ರಯಾಣಿಕರ ಹುಟುಕಾಟ ಶುರು ಮಾಡಲಾಗಿದೆ. ಆದರೆ, ದಕ್ಷಿಣ ಆಫ್ರಿಕಾದಿಂದ ಬಂದವರಲ್ಲಿ ಕೆಲವರ ಮಾಹಿತಿಯೇ ಪತ್ತೆಯಾಗುತ್ತಿಲ್ಲ. ಪ್ರಯಾಣಿಕರ ಮೊಬೈಲ್‌ ಸ್ವಿಚ್ಡ್‌ ಆಫ್‌ ಬರುತ್ತಿದೆ. ಪಾಸ್‌ಪೋರ್ಟ್‌ನಲ್ಲಿರುವ ವಿಳಾಸಕ್ಕೆ ಹೋದರೆ ಅಲ್ಲಿ ಅವರು ಇಲ್ಲವೇ ಇಲ್ಲ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕಳೆದ 15 ದಿನಗಳಲ್ಲಿ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಒಟ್ಟು 57 ಜನರು ಆಗಮಿಸಿದ್ದರು. ಇವರಲ್ಲಿ 10 ಮಂದಿಯ ಮಾಹಿತಿಯೇ ಸಿಕ್ಕಿಲ್ಲ. ಅವರನ್ನು ಹುಡುಕಿ ಹುಡುಕಿ ಬಿಬಿಎಂಪಿ ಅಧಿಕಾರಿಗಳು ಸುಸ್ತಾಗಿದ್ದಾರೆ.

Share Post