DistrictsLifestyle

ಕಾಫಿನಾಡಲ್ಲಿ ಅಪರೂಪದ ಸುಂದರ ಹಾವು ಪತ್ತೆ; ಕಡಿದರೆ ಏನಾಗುತ್ತೆ ಗೊತ್ತಾ..?

ಚಿಕ್ಕಮಗಳೂರು; ಕಾಡಿನ ಎಷ್ಟೋ ಪ್ರಭೇಧದ ಪ್ರಾಣಿಗಳು ಅಳಿವಿನಂಚಿನಲ್ಲಿವೆ. ಅವುಗಳನ್ನು ಉಳಿಸುವ, ಅವುಗಳ ಸಂತತಿ ಬೆಳೆಸುವ ಕಾರ್ಯ ನಡೆಯುತ್ತಿದೆಯಾದರೂ, ಕೆಲ ಪ್ರಬೇಧಗಳ ಪ್ರಾಣಿಗಳು ಕಾಣಸಿಗೋದೇ ಅಪರೂಪ. ಅಂತ ಅಪರೂಪದ ಪ್ರಾಣಿಗಳಲ್ಲಿ ಬ್ಯಾಂಬೋ ಪಿಟ್‌ ವೈಫರ್‌ ಎಂಬ ಹಾವು ಕೂಡಾ ಒಂದು. ಅತ್ಯಂತ ಸುಂದರವಾಗಿರುವ ಈ ಹಾವುಗಳು ಇತ್ತೀಚೆಗೆ ಕಾಣಸಿಗೋದೇ ಇಲ್ಲ. ಇದೀಗ ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಪಕ್ಕದ ಚಂದ್ರು ಭಟ್ ಮನೆಯ ಅಂಗಳದಲ್ಲಿ ಈ ಹಾವು ಸಿಕ್ಕಿದೆ.

ಇದು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುತ್ತದೆ. ಈ ಹಾವಿನ ತಲೆ ಮೇಲೆ ನೀರು ಬಿದ್ದರೆ ಅದನ್ನು ಹಾಗೆಯೇ ಹೀರಿಕೊಳ್ಳುತ್ತದೆ. ಅಂತಹ ಅಪರೂಪದ ಗುಣ ಹಾವಿಗಿದೆ. ಇನ್ನು ಈ ಈ ಬ್ಯಾಂಬೋ ಪಿಟ್‌ ವೈಪರ್‌ ಕಡಿದರೆ ಸಾಯುವುದಿಲ್ಲ, ಬದಲಾಗಿ ಮತ್ತು ಬರುತ್ತದೆ, ಜ್ಞಾನ ಕೂಡಾ ತಪ್ಪುತ್ತದೆ.

ಕಾಫಿನಾಡ ಕಳಸದಲ್ಲಿ ಅಪರೂಪದ ಬ್ಯಾಂಬೋ ಪಿಟ್ ವೈಫರ್ ಹಾವಿನ ಸೆರೆ ಹಿಡಿಯಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇದು ಕಂಡುಬರಲಿದ್ದು ಅಳಿವಿನಂಚಿನಲ್ಲಿದೆ. ತಲೆ ಮೇಲೆ ಬಿದ್ದ ನೀರನ್ನ ಹಾಗೇ ಹೀರಿಕೊಳ್ಳುವ ಅಪರೂಪದ ಉರಗ ಇದು. ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಪಕ್ಕದ ಚಂದ್ರು ಭಟ್ ಮನೆಯ ಅಂಗಳದಲ್ಲಿ ಬ್ಯಾಂಬೋ ಪಿಟ್ ವೈಫರ್ ಕಂಡು ಬಂದಿದೆ. ಈ ಹಾವು ಕಡಿದರೆ ಸಾಯುವುದಿಲ್ಲ, ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ.

Share Post