CrimeNational

ಅಮೃತಸರದ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ; ನಾಲ್ವರ ದುರ್ಮರಣ!

ಅಮೃತಸರ; ಅಮೃತಸರದಲ್ಲೂ ಇವತ್ತು ಒಂದು ಬೆಂಕಿ ದುರಂತ ಸಂಭವಿಸಿದೆ.  ಇಲ್ಲಿನ ಫಾರ್ಮಾಸ್ಯುಟಿಕಲ್ ಫ್ಯಾಕ್ಟರಿಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಅಮೃತಸರದ ಮಜಿತಾ ರಸ್ತೆಯಲ್ಲಿರುವ ಫ್ಯಾಕ್ಟರಿಯಲ್ಲಿ ಈ ದುರ್ಘಟನೆ ನಡೆದಿದೆ. ಫ್ಯಾಕ್ಟರಿಯಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕಗಳಿದ್ದವು. ಈ ಕಾರಣದಿಂದಾಗಿಯೇ ಬೆಂಕಿ ದುರಂತ ನಡೆದಿರಬಹುದು ಎಂದು ಹೇಳಲಾಗಿದೆ.

ಬೆಂಕಿ ಆಕಸ್ಮಿಕ ಸಂಭವಿಸಿದಾಗ ಹಲವಾರು ಕಾರ್ಮಿಕರು ಫ್ಯಾಕ್ಟರಿ ಒಳಗೇ ಇದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಲ್ಲರೂ ಹೊರಗೆ ಓಡಿಬಂದಿದ್ದಾರೆ. ಆದ್ರೆ ನಾಲ್ವರು ಬೆಂಕಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

 

Share Post