CrimeNational

ನಾಪತ್ತೆಯಾಗಿದ್ದ ಮೂವರ ಅಪ್ರಾಪ್ತೆಯರ ದೇಹ ಟ್ರಂಕ್‌ನಲ್ಲಿ ಪತ್ತೆ..!

ಚಂಡೀಗಢ; ಕೂಲಿ ಕಾರ್ಮಿಕರೊಬ್ಬರ ಮೂವರು ಮಕ್ಕಳು ನಾಪತ್ತೆಯಾಗಿದ್ದರು. ಅವರನ್ನು ಹುಡುಕುತ್ತಿರುವಾಗಲೇ, ಆ ಮೂವರ ದೇಹಗಳೂ ಅವರದೇ ಮನೆಯ ಟ್ರಂಕ್‌ ಒಂದರಲ್ಲಿ ಸಿಕ್ಕಿವೆ. ಪಂಜಾಬ್‌ ನ ಜಲಂಧರ್‌ ಜಿಲ್ಲೆಯಲ್ಲಿ ಬರುವ ಕಾನ್ಪುರ ಎಂಬ ಗ್ರಾಮದಲ್ಲಿ ನಡೆದಿದೆ. 

ನಾಲ್ಕು ವರ್ಷದ ಕಾಂಚನಾ, ಏಳು ವರ್ಷದ ಶಕ್ತಿ ಹಾಗೂ ಒಂಬತ್ತು ವರ್ಷದ ಅಮೃತಾ ಮೃತಪಟ್ಟವರು. ಈ ಬಾಲಕಿಯರ ಪೋಷಕರು ಕೂಲಿ ಕಾರ್ಮಿಕರಾಗಿದ್ದಾರೆ. ಇವರಿಗೆ ಐವರು ಮಕ್ಕಳಿದ್ದು, ಕೂಲಿ ಕೆಲಸಕ್ಕೆ ಹೋಗುವಾಗ ಎಲ್ಲಾ ಮಕ್ಕಳನ್ನೂ ಮನೆಯಲ್ಲೇ ಬಿಟ್ಟು ಹೋಗಿದ್ದರು. ಆದ್ರೆ ಸಂಜೆ ಬರುವಷ್ಟರಲ್ಲಿ ಐವರು ಮಕ್ಕಳಲ್ಲಿ ಮೂವರು ಮಕ್ಕಳು ಕಾಣೆಯಾಗಿದ್ದರು. ಹೀಗಾಗಿ ಮಕ್ಕಳ ತಂದೆ ಭಾನುವಾರ ರಾತ್ರಿ ಹತ್ತಿರದ ಮಕ್ಸೂದ್‌ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಿದ್ದರು.

ಈ ನಡುವೆ ಮಕ್ಕಳ ತಂದೆ ಮನೆಯಲ್ಲಿನ ವಸ್ತುಗಳನ್ನು ಜೋಡಿಸುತ್ತಿದ್ದರು. ಈ ವೇಳೆ ಟ್ರಂಕ್‌ ಒಂದು ಹೆಚ್ಚು ಭಾರ ಇತ್ತು. ಹೀಗಾಗಿ ಅನುಮಾನ ಬಂದು ನೋಡಿದಾಗ ಆ ಟ್ರಂಕ್‌ನಲ್ಲಿ ಮಕ್ಕಳ ಮೃತದೇಹಗಳಿರುವುದು ಕಂಡುಬಂದಿದೆ.

ಮೂವರೂ ಬಾಲಕಿಯರು ನಿಗೂಢವಾಗಿ ಸಾವನ್ನಪ್ಪಿದ್ದು, ಈ ಬಗ್ಗೆ ಹಲವು ಅನುಮಾನಗಳಿವೆ. ಬಾಲಕರಿಯರ ತಂದೆಗೆ ಕುಡಿತದ ಚಟವಿದೆ ಎಂದು ತಿಳಿದುಬಂದಿದೆ. ಜೊತೆ ಬಾಡಿಗೆಗೆ ಕೊಟ್ಟಿದ್ದ ಮನೆ ಮಾಲೀಕ ಮನೆ ಖಾಲಿ ಮಾಡುವಂತೆ ಸೂಚಿಸುತ್ತಿದ್ದ ಎನ್ನಲಾಗಿದೆ. ಹೀಗಿರುವಾಗಲೇ ಮೂವರು ಬಾಲಕಿಯರು ಸಾವನ್ನಪ್ಪಿದ್ದಾರೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

 

Share Post