BengaluruPolitics

ಚುನಾವಣೆ ವೇಳೆ ಐರನ್‌ ಬಾಕ್ಸ್‌, ಕುಕ್ಕರ್‌ ಹಂಚಿಕೆ; ವಿಪಕ್ಷಗಳಿಗೆ ಅಸ್ತ್ರವಾದ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ

ಮೈಸೂರು; ವಿಧಾನಸಭಾ ಚುನಾವಣೆಗೂ ಮುನ್ನ ಮಡಿವಾಳ ಸಮುದಾಯಕ್ಕೆ ಐರನ್‌ ಬಾಕ್ಸ್‌ ಹಾಗೂ ಕುಕ್ಕರ್‌ಗಳನ್ನು ನೀಡಿದ್ದೆವು. ಈ ಸಮಾಜದ ಹೆಚ್ಚಿನ ಮತಗಳು ನಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ಸಿಗುವಂತಾಯಿತು ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದು, ಇದು ಈಗ ವಿಪಕ್ಷಗಳಿಗೆ ಅಸ್ತ್ರವಾಗಿದೆ.

ನಂಜನಗೂಡಿನಲ್ಲಿ ಶುಕ್ರವಾರ ತಾಲ್ಲೂಕು ಮಡಿವಾಳರ ಸಮುದಾಯ ಭವನದ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯತೀಂದ್ರ ಸಿದ್ದರಾಮಯ್ಯ ಅವರು, ವರುಣಾ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದವರನ್ನು ಸಂಘಟನೆ ಮಾಡಲೆಂದು ಸಾವಿರಾರು ಜನರನ್ನು ಸೇರಿಸಲಾಗಿತ್ತು. ಅವರಿಗೆ ಕುಕ್ಕರ್‌, ಐರನ್‌ ಬಾಕ್ಸ್‌ಗಳನ್ನು ನೀಡಲಾಗಿತ್ತು. ಆ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ ನನ್ನ ತಂದೆ ಸಿದ್ದರಾಮಯ್ಯ ಅವರ ಕೈಯಿಂದಲೇ ಅವುಗಳನ್ನು ಕೊಡಿಸಿದ್ದರು ಎಂದು ನೆನಪಿಸಿಕೊಂಡಿದ್ದರು.

ಈ ವಿಚಾರ ಈಗ ಹೆಚ್ಚು ವೈರಲ್‌ ಆಗುತ್ತಿದ್ದು, ಮತದಾರರಿಗೆ ಆಮಿಷವೊಡ್ಡಲಾಗಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಆದ್ರೆ ಇದಕ್ಕೆ ಯತೀಂದ್ರ ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ. ಆ ಉಡುಗೊರೆಗಳನ್ನು ಮಡಿವಾಳ ಸಮುದಾಯದ ಪದಾಧಿಕಾರಿಗಳು ವಿತರಿಸಿದ್ದರು. ನಮ್ಮ ತಂದೆಯವರು ಕೋಲಾರದಿಂದ ಸ್ಪರ್ಧೆ ಮಾಡೋದಕ್ಕೆ ತೀರ್ಮಾನ ಮಾಡಿದ್ದರು. ಆದ್ರೆ ಆಗ ನಡೆ ಮಡಿವಾಳ ಸಮುದಾಯದ ಸಮಾವೇಶಕ್ಕೆ ನಾನು ಹೋಗಲು ಆಗಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಹೋಗಿದ್ದರು. ಅವರ ಕೈಯಿಂದ ಉಡುಗೊರೆ ವಿತರಿಸಲಾಗಿತ್ತು. ಆದ್ರೆ ಅದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂದು ಯತೀಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ.

 

Share Post