National

ಮಹಿಳಾ ಮೀಸಲಾತಿ ಕಾನೂನು ಅಂಗೀಕಾರವಾದರೂ ಜಾರಿ ಆಗೋದು 2029ಕ್ಕಂತೆ..!

ನವದೆಹಲಿ; ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಇಂದು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಇದು ಎರಡೂ ಸದನಗಳಲ್ಲಿ ಅಂಗೀಕಾರವಾದರೂ, ಮಹಿಳೆಯರಿಗೆ ಮೀಸಲಾತಿ ಸಿಗೋದು 2029ರ ಲೋಕಸಭಾ ಚುನಾವಣೆ ವೇಳೆಗೆ.

ಮಸೂದೆ ಮಂಡನೆ ಮಾಡಲಾಗಿದ್ದು, ದು ಕಾನೂನಾಗಬೇಕು. ಅದರ ನಂತರ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಾಗಬೇಕು. ಆಗ ಮಾತ್ರ ಮೀಸಲಾತಿ ಅನುಷ್ಠಾನವಾಗುತ್ತದೆ. 2021ರಲ್ಲಿ ಜನಗಣತಿಯನ್ನು ನಡೆಸಬೇಕಿತ್ತು. ಆದ್ರೆ, ಕೋವಿಡ್‌ ಕಾರಣದಿಂದಾಗಿ ಜನಗಣತಿ ಮಾಡಿಲ್ಲ. ಹೀಗಾಗಿ 2027ರ ವೇಳೆಗೆ ಜನಗಣತಿ ಹಾಗೂ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಾಗುವ ಸಾಧ್ಯತೆ ಇದೆ.  ಅದಾದ ನಂತರ 2029ಕ್ಕೆ ಬರುವ ಚುನಾವಣೆಯಲ್ಲಿ ನೂತನ ಮಸೂದೆ ಕಾನೂನಾಗಿ ಅನುಷ್ಠಾನವಾಗಲಿದೆ.

ಮಸೂದೆ ಏನು ಹೇಳುತ್ತದೆ?
ಮಸೂದೆಯು ಕಾಯಿದೆ ಅಥವಾ ಕಾನೂನಾದ ಬಳಿಕ 15 ವರ್ಷಗಳವರೆಗೆ ಜಾರಿಯಲ್ಲಿರುತ್ತೆ. ಆದ್ರೆ ಆ ಅವಧಿಯನ್ನು ವಿಸ್ತರಿಸುಬಹುದಾದ ಅವಕಾಶವಿರುತ್ತದೆ. ಮುಖ್ಯವಾಗಿ, ಪ್ರತಿ ಡಿಲಿಮಿಟೇಷನ್ ಪ್ರಕ್ರಿಯೆ ನಂತರ ಮಹಿಳೆಯರಿಗೆ ಮೀಸಲಾದ ಸೀಟುಗಳನ್ನು ಸರದಿಯಲ್ಲಿ ನೀಡಲಾಗುತ್ತದೆ. ಆರು ಪುಟಗಳ ಮಸೂದೆಯು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಮತ್ತು ನೇರ ಚುನಾವಣೆಯ ಮೂಲಕ ಭರ್ತಿ ಮಾಡಲಾಗುವುದು ಎಂದು ಹೇಳುತ್ತದೆ.

 

Share Post