BengaluruPolitics

ರಾಜ್ಯದ ರೈತರ ಹಿತ ಕಾಯಲು ಸರ್ವಪಕ್ಷ ಸಭೆ ನಿರ್ಣಯಿಸಿದೆ; ಡಿ.ಕೆ.ಶಿವಕುಮಾರ್

ಬೆಂಗಳೂರು; ಇಂದಿನ ಸಭೆಯಲ್ಲಿ ಮೂರು ಪಕ್ಷಗಳ ನಾಯಕರು, ಒಂಬತ್ತು ಮಂದಿ ಸಂಸತ್ ಸದಸ್ಯರು ಭಾಗವಹಿಸಿದ್ದರು. ಬಹಳ ಕಡಿಮೆ ಸಮಯ ಅವಕಾಶ ಇದ್ದಿದ್ದರಿಂದ ಕೆಲವರು ಬರಲು ಆಗಿಲ್ಲ ಎಂದು ತಿಳಿಸಿದ್ದಾರೆ. ನಮ್ಮ ರಾಜ್ಯದ ರೈತರ ಹಿತ ಕಾಯಲು ಸರ್ವಪಕ್ಷ ಸಭೆ ನಿರ್ಣಯಿಸಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸಂಸತ್ತಿನ ಒಳಗೆ ಮತ್ತು ಹೊರಗೆ ಒಗ್ಗಟ್ಟಿನಿಂದ ಹೋರಾಡುವುದಾಗಿ ಇಂದಿನ ಸಭೆಯಲ್ಲಿ ಭಾಗವಹಿಸಿದ್ದ ಆಡಳಿತ ಮತ್ತು ವಿರೋಧ ನಾಯಕರು ಹೇಳಿದ್ದಾರೆ. ಆಗಸ್ಟ್ ತಿಂಗಳಿಗೆ ಸೀಮಿತವಾದಂತೆ ಕಾವೇರಿ ಕಣಿವೆಯಲ್ಲಿ ಕಳೆದ 123 ವರ್ಷಗಳಲ್ಲೇ ಅತಿ ಕಡಿಮೆ ಮಳೆ ಆಗಿದೆ. ಸಾಮಾನ್ಯ ಸ್ಥಿತಿಯಲ್ಲಿ ಆಗಿದ್ದರೆ ನಾವು ತಮಿಳುನಾಡಿಗೆ 90.8 ಟಿಎಂಸಿ ನೀರು ಬಿಡಬೇಕಿತ್ತು. ಆದರೆ ಮಳೆ ಅಭಾವದ ಹಿನ್ನೆಲೆಯಲ್ಲಿ 37 ಟಿಎಂಸಿ ಬಿಡಲು ಮಾತ್ರ ಸಾಧ್ಯವಾಗಿದೆ. ಆದರೆ ಸಂಕಷ್ಟ ಪರಿಸ್ಥಿತಿ ಸೂತ್ರ ಇನ್ನೂ ರಚನೆ ಆಗಿಲ್ಲ. ಹೀಗಾಗಿ ರಾಜ್ಯದ ಹಿತ ಕಾಯಲು ಒಟ್ಟಿಗೆ ಹೋರಾಟ ಮಾಡಲು ಎಲ್ಲ ಪಕ್ಷಗಳ ಮುಖಂಡರು ತೀರ್ಮಾನಿಸಿದ್ದಾರೆ.

Share Post