International

ವಿಮಾನದ ಟಾಯ್ಲೆಟ್‌ನಲ್ಲೇ ಸೆಕ್ಸ್‌; ಸಿಕ್ಕಿಬಿದ್ದ ಜೋಡಿ ಕಕ್ಕಾಬಿಕ್ಕಿ

ಲಂಡನ್; ಅದೆಷ್ಟು ಬರಗೆಟ್ಟಿದ್ದರೋ, ಅದೆಷ್ಟು ಆತುರವಾಗಿತ್ತೋ ಏನೋ.. ಜೋಡಿಯೊಂದು ವಿಮಾನದಲ್ಲೇ ಸೆಕ್ಸ್‌ ಮಾಡಲು ಹೋಗಿ ಸಿಕ್ಕಿಬಿದ್ದು ಅವಮಾನ ಅನುಭವಿಸಿದೆ. ಲಂಡನ್‌ನ ಈಸಿಜೆಟ್‌ ವಿಮಾನದ ಟಾಯ್ಲೆಟ್‌ನಲ್ಲಿ ಈ ಘಟನೆ ನಡೆದಿದೆ. ಇದನ್ನು ವಿಮಾನದ ಕ್ಯಾಬಿನ್‌ ಸಿಬ್ಬಂದಿ ನೋಡಿದ್ದು, ಇಬ್ಬರನ್ನೂ ರೆಡ್‌ಹ್ಯಾಂಡಾಗಿ ಹಿಡಿದಿದ್ದಾರೆ.

ಸಿಕ್ಕಿಬಿದ್ದ ಜೋಡಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಂದಹಾಗೆ, ಜೋಡಿ ಟಾಯ್ಲೆಟ್‌ನಲ್ಲಿ ಸೆಕ್ಸ್‌ ಮಾಡುತ್ತಿದ್ದರ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಆದ್ರೆ ವಿಮಾನದ ಸಿಬ್ಬಂದಿ, ವಾಶ್‌ ರೂಂಗೆ ಹೋಗಿದ್ದಾರೆ. ಜೋಡಿಯ ದುರದೃಷ್ಟವೋ ಏನೋ ಅವರು ಟಾಯ್ಲೆಟ್‌ ರೂಮ್‌ ಬಾಗಿಲು ಲಾಕ್‌ ಮಾಡೋದನ್ನು ಮರೆತಿದ್ದಾರೆ. ಹೀಗಾಗಿ ವಿಮಾನದ ಸಿಬ್ಬಂದಿ ಬಾಗಿಲು ನೂಕುತ್ತಿದ್ದ ಅದು ಓಪನ್‌ ಆಗಿದೆ. ಈ ವೇಳೆ ಜೋಡಿಯೊಂದು ಅಲ್ಲಿ ಅಶ್ಲೀಲ ಭಂಗಿಯಲ್ಲಿ ಕಾಣಿಸಿದೆ.

ಈ ದೃಶ್ಯ ನೋಡುತ್ತಿದ್ದಂತೆ ವಿಮಾನದ ಸಿಬ್ಬಂದಿ ಮುಜುಗರದಿಂದ ಬೇರೆ ಕಡೆ ಹೋಗಿದ್ದಾರೆ. ಇನ್ನು ಇದೇ ವೇಳೆ ಇತರ ಪ್ರಯಾಣಿಕರು ಕೂಡಾ ಈ ದೃಶ್ಯ ನೋಡಿ ನಗಾಡಿದ್ದಾರೆ.

 

Share Post