CrimeNational

ಕೇಂದ್ರ ಸಚಿವನ ಮನೆಯಲ್ಲಿ ಗುಂಡಿನ ಸದ್ದು; ಗುಂಡಿಕ್ಕಿ ವ್ಯಕ್ತಿಯ ಕೊಲೆ..!

ಲಕ್ನೋ; ಕೇಂದ್ರ ಸಚಿವ ಕೌಶಲ್ ಕಿಶೋರ್ ಮನೆಯಲ್ಲಿ ಹತ್ಯೆಯೊಂದು ನಡೆದಿದೆ. ವಿನಯ್‌ ಶ್ರೀವಾಸ್ತವ್‌ ಎಂಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಠಾಕುರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬೆಗಾರಿಯಾ ಗ್ರಾಮದಲ್ಲಿರುವ ಕೇಂದ್ರ ರಾಜ್ಯ ಸಚಿವ ಕೌಶಲ್ ಕಿಶೋರ್  ಅವರ ನಿವಾಸದಲ್ಲಿ ಈ ಕೃತ್ಯ ಎಸಗಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪಿಸ್ತೂಲ್‌ನಿಂದ ಗುಂಡು ಹಾರಿಸಿ ವಿನಯ್‌ ಶ್ರೀವಾಸ್ತವ್‌ ಅವರನ್ನು ಕೊಲೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಯಾದ ವ್ಯಕ್ತಿ ಕೂಡ ಬಿಜೆಪಿ ಕಾರ್ಯಕರ್ತ. ಇವರು ಕೇಂದ್ರ ಸಚಿವ ಕೌಶಲ್‌ ಅವರ ಪುತರ ವಿಕಾಸ್‌ ಕಿಶೋರ್‌ ಜೊತೆ ವಾಸವಿದ್ದರು ಎನ್ನಲಾಗಿದೆ. ಬೆಳಗಿನ ಜಾವ ಆತನ ತೆಲೆಗ ಗುಂಡು ಹಾರಿಸಲಾಗಿದೆ. ಈ ಸಂದರ್ಭದಲ್ಲಿ ಅಜಯ್ ರಾವತ್, ಅಂಕಿತ್ ಶರ್ಮಾ, ಶಮೀಮ್ ಬಾಬಾ, ಬಂಟಿ ಮತ್ತು ಇನ್ನಿಬ್ಬರು ಅಪರಿಚತರು ಸ್ಥಳದಲ್ಲಿದ್ದರು ಎನ್ನಲಾಗಿದೆ.

Share Post