CinemaCrimeNational

ಐಆರ್‌ಎಸ್‌ ಅಧಿಕಾರಿಯಿಂದ ಕೋಟಿ ಕೋಟಿ ಉಡುಗೊರೆ; ಖ್ಯಾತ ನಟಿ ನವ್ಯಾ ನಾಯರ್‌ಗೆ ಸಂಕಷ್ಟ

ಮುಂಬೈ; ಐಆರ್‌ಎಸ್‌ ಅಧಿಕಾರಿಯಿಂದ ಕೋಟಿ ಕೋಟಿ ಉಡುಗೊರೆ ಪಡೆದಿರುವ ಆರೋಪಿ ಎದುರಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ನವ್ಯಾ ನಾಯರ್‌ಗೆ ಕಾನೂನು ಸಂಕಷ್ಟ ಎದುರಾಗಿದೆ. ಇಡಿ ಅಧಿಕಾರಿಗಳು ಈ ಪ್ರಕರಣದ ಸಂಬಂಧ ನವ್ಯಾ ನಾಯರ್‌ ಅವರನ್ನು ಮುಂಬೈನ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ನವ್ಯಾ ನಾಯರ್‌ ಅವರಿಗೆ ಈ ಪ್ರಕರಣದಲ್ಲಿ ಬಂಧನದ ಭೀತಿ ಕೂಡಾ ಇದೆ ಎಂದು ಹೇಳಲಾಗುತ್ತಿದೆ.

ಐ.ಆರ್.ಎಸ್ ಅಧಿಕಾರಿ ಸಚಿನ್ ಸಾವಂತ್ ಅವರ ಜೊತೆ ನವ್ಯಾ ನಾಯರ್‌ಗೆ ಸ್ವೇಹ ಸಂಬಂಧ ಇತ್ತು. ಹೀಗಾಗಿ ಅಧಿಕಾರಿ ಸಚಿನ್‌ ಅವರು ನವ್ಯಾ ನಾಯರ್‌ಗೆ ಚಿನ್ನ ಸೇರಿದಂತೆ ಭಾರಿ ಮೊತ್ತದ ಉಡುಗೊರೆಗಳನ್ನು ನೀಡಿದ್ದಾರೆ. ನವ್ಯಾ ಭೇಟಿಗಾಗಿ ಸಚಿವ್‌ ಹಲವಾರು ಬಾರಿ ಕೊಚಿನ್‌ಗೂ ಹೋಗಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಅಧಿಕಾರಿ ಸಚಿನ್‌ ಅವರ ಮೊಬೈಲ್‌ ಪರಿಶೀಲಿಸಿದಾಗ ವಾಟ್ಸಾಪ್‌ ಚಾಟ್‌ ಹಾಗೂ ಮೊಬೈಲ್‌ಗಳಲ್ಲಿ ನವ್ಯಾ ನಾಯರ್‌ ಸ್ನೇಹದ ಬಗ್ಗೆ ಮಾಹಿತಿ ಸಿಕ್ಕಿದೆ.

ಸಚಿನ್‌ ಸಾವಂತ್‌ ಅವರನ್ನು ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ನವ್ಯಾ ನಾಯರ್‌ಗೂ ಸಚಿವ ಭಾರಿ ಮೊತ್ತದ ಉಡುಗೊರೆಗಳನ್ನು ನೀಡಿದ್ದಾರೆ. ಜೊತೆಗೆ ಕೋಟ್ಯಂತರ ರೂಪಾಯಿ ಹಣವನ್ನು ಕೂಡಾ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ನವ್ಯಾ ಕೂಡಾ ಒಪ್ಪಿಕೊಂಡಿದ್ದು, ಸ್ವೇಹದ ಸಂಕೇತವಾಗಿ ಅವರು ಚಿನ್ನದ ಉಡುಗೊರೆಗಳನ್ನು ನೀಡಿದ್ದಾರೆ. ನಮ್ಮ ನಡುವೆ ಯಾವುದೇ ವ್ಯವಹಾರ ಆಗಿಲ್ಲ ಎಂದು ಆಕೆ ಹೇಳಿದ್ದಾರೆ ಎನ್ನಲಾಗಿದೆ.

ನವ್ಯಾ ನಾಯರ್‌ ಅವರು ಕನ್ನಡ, ಮಲಯಾಳಂ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳನ್ನು ನಟನೆ ಮಾಡಿದ್ದಾರೆ.

 

Share Post