International

ಚುನಾವಣೆಯಲ್ಲಿ ಅಕ್ರಮದ ಆರೋಪ; ಟ್ರಂಪ್‌ ಬಂಧನ, ಬಿಡುಗಡೆ

ವಾಷಿಂಗ್ಟನ್; ಚುನಾವಣೆಯಲ್ಲಿ ಅಕ್ರಮ ಮಾಡಿದ್ದಾರೆಂಬ ಆರೋಪದ ಮೇಲೆ ನಿನ್ನೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಬಂಧಿಸಲಾಗಿತ್ತು. ಅನಂತರ ೧.೬೫ ಕೋಟಿ ರೂಪಾಯಿ ಬಾಂಡ್‌ ಪಡೆದು ಬಿಡುಗಡೆ ಮಾಡಲಾಗಿದೆ.

೨೦೨೦ರ ಚುನಾವಭಾ ಫಲಿತಾಂಶ ರದ್ದುಗೊಳಿಸುವುದಕ್ಕಾಗಿ ಸಂಚು ರೂಪಿಸಲು 18 ಆರೋಪಿಗಳಿಗೆ ಸಹಕರಿಸಿದ ಆರೋಪ ಡೊನಾಲ್ಡ್‌ ಟ್ರಂಪ್‌ ಮೇಲಿದೆ. ಇಂತಹ ಆರೋಪ ಎದುರಿಸುತ್ತಿರುವ ಅಮೆರಿಕ ಮೊದಲ ಮಾಜಿ ಅಧ್ಯಕ್ಷ ಇವರಾಗಿದ್ದಾರೆ.  ಬಂಧನದ ಬಳಿಕ ಜಾರ್ಜಿಯಾ ಜೈಲಿನಲ್ಲಿ ಅವರಿಗೆ ಕೈದಿ ಸಂಖ್ಯೆ `ಪಿಓ1135809′ ನೀಡಲಾಗಿತ್ತು.

 

Share Post