LifestyleNational

ನರಸಿಂಹ ಸ್ವಾಮಿ ಹುಂಡಿಯಲ್ಲಿ ಸಿಕ್ತು 100 ಕೋಟಿ ರೂಪಾಯಿ ಚೆಕ್‌..!

ವಿಶಾಖಪಟ್ಟಣಂ (ಆಂಧ್ರಪ್ರದೇಶ); ದೇವರ ಹುಂಡಿಯಲ್ಲಿ ಪತ್ರಗಳು, ವಸ್ತುಗಳು ಏನೇನೋ ಸಿಗುತ್ತಿರುತ್ತವೆ. ಆದ್ರೆ, ಇಲ್ಲೊಂದು ದೇವಸ್ಥಾನದಲ್ಲಿ ಚೆಕ್‌ ಒಂದು ಸಿಕ್ಕಿದ್ದು, ಹುಂಡಿ ಎಣಿಸುತ್ತಿರುವವರನ್ನು ಬೆಚ್ಚಿಬೀಳಿಸಿದೆ. ಯಾಕಂದ್ರೆ, ಆ ಚೆಕ್‌ನಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಎಂದು ಬರೆಯಲಾಗಿದೆ. ಕೋಟಕ್‌ ಮಹಿಂದ್ರ ಬ್ಯಾಂಕ್‌ ನಲ್ಲಿನ ಉಳಿತಾಯ ಖಾತೆಯ ಚೆಕ್‌ ಇದಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸಿಂಹಾಚಲಂ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ಹುಂಡಿಯನ್ನು 15 ದಿನಕ್ಕೊಮ್ಮೆ ಎಣಿಸಲಾಗುತ್ತದೆ. ನಿನ್ನೆ ಕೂಡಾ ಹುಂಡಿಯಲ್ಲಿನ ಹಣ ಎಣಿಸಲಾಗಿದ್ದು, ಈ ವೇಳೆ ಈ ಚೆಕ್‌ ಸಿಕ್ಕಿದೆ.  ಬೊಡ್ಡೆಪಲ್ಲಿ ರಾಧಾಕೃಷ್ಣ ಅವರ ಉಳಿತಾಯ ಖಾತೆಗೆ ಸೇರಿದ್ದ ಚೆಕ್‌ ಇದಾಗಿದೆ. ಭಾರಿ ಮೊತ್ತದ ಚೆಕ್‌ ಪತ್ತೆಯಾಗುತ್ತಿದ್ದಂತೆ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಚೆಕ್ ಸಂಖ್ಯೆ MVP ಡಬಲ್ ರೋಡ್ ಶಾಖೆಯ ಹೆಸರಿನಲ್ಲಿದ್ದು,. ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಆ ಬ್ಯಾಂಕ್‌ ಶಾಖೆಗೆ ಹೋಗಿ ಚೆಕ್‌ಗೆ ಸಂಬಂಧಿಸಿದ ಅಕೌಂಟ್‌ನಲ್ಲಿ ಎಷ್ಟು ಹಣ ಇದೆ ಎಂದು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಅಕೌಂಟ್‌ನಲ್ಲಿ 17 ರೂಪಾಯಿ ಮಾತ್ರ ಇರೋದು ಗೊತ್ತಾಗಿದೆ. ತಮಾಷೆಗೆ ಹೀಗೆ ಭಾರಿ ಮೊತ್ತದ ಚೆಕ್‌ನ್ನು ಹುಂಡಿಗೆ ಹಾಕಿರುವುದು ಗೊತ್ತಾಗಿದೆ. ಅಧಿಕಾರಿಗಳು ಸಂಬಂಧಪಟ್ಟ ವ್ಯಕ್ತಿ ಕರೆಸಿ ಎಚ್ಚರಿಕೆ ಕೊಟ್ಟಿದ್ದಾರೆ. ಮುಂದೆ ಇಂತಹ ದುರ್ವರ್ತನೆ ತೋರಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

 

Share Post