ನೀರು ಕಾಯಿಸುವ ಕಾಯಿಲ್ ಸ್ಪರ್ಶ; ಮೂವರ ದುರ್ಮರಣ
ಬೆಳಗಾವಿ; ಮನೆಯಲ್ಲಿ ನೀರು ಕಾಯಿಸಲು ಹಾಕಿದ್ದ ಕಾಯಿಲ್ ಸ್ಪರ್ಶಿಸಿ ಮೂವರು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಶಾಹುನಗರದಲ್ಲಿ ನಡೆದಿದೆ. ಎಂಟು ವರ್ಷದ ಮಗುವೊಂದು ತಿಳಿಯದೇ ಕಾಯಿಲ್ ಸ್ಪರ್ಶಿಸಿದ್ದು, ಆಕೆಯನ್ನು ಕಾಪಾಡಲು ಹೋಗಿ ಅಜ್ಜ, ಅಜ್ಜಿ ಕೂಡಾ ದುರ್ಮರಣಕ್ಕೀಡಾಗಿದ್ದಾರೆ.
ಮೃತರನ್ನು ಈರಪ್ಪ ಗಂಗಪ್ಪ ಲಮಾಣಿ, ಶಾಂತವ್ವ ಈರಪ್ಪ ಲಮಾಣಿ ಹಾಗೂ ಮೊಮ್ಮಗಳು ಅನ್ನಪೂರ್ಣ ಹುನ್ನಪ್ಪ ಲಮಾಣಿ ಎಂದು ಗುರುತಿಸಲಾಗಿದೆ. ಇವರು ಮೂಲತಃ ರಾಮದುರ್ಗ ತಾಲ್ಲೂಕು ಅರಬೆಂಚಿ ತಾಂಡಾದವರು ಎಂದು ತಿಳಿದುಬಂದಿದೆ.
ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಶಾಹುನಗರದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಇವರು ಬೆಳಗಾವಿ ಶಾಹುನಗರದ ಏಳನೇ ಕ್ರಾಸ್‌ನ ನಿರ್ಮಾಣ ಹಂತದ ಮನೆಯಲ್ಲಿದ್ದರು. ಅಲ್ಲಿ ಸ್ನಾನಕ್ಕಾಗಿ ನೀರು ಕಾಯಿಸಲು ಕಾಯಿಲ್ ಹಾಕಲಾಗಿತ್ತು. ಮಗು ಅದು ಗೊತ್ತಿಲ್ಲದೆ ಮುಟ್ಟಿದ್ದಾಳೆ. ಆಕೆ ಒದ್ದಾಡುತ್ತಿರುವುದರನ್ನು ನೋಡಿ ಅಜ್ಜ, ಅಜ್ಜಿ ಕೂಡಾ ಆಕೆಯನ್ನು ಮುಟ್ಟಿದ್ದಾರೆ. ಅವರಿಗೂ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ.