BengaluruCinemaHealth

ಇಂದು ರಾತ್ರಿ ಭಾರತಕ್ಕೆ ಸ್ಪಂದನಾ ಮೃತದೇಹ; ನಾಳೆ ಹರಿಶ್ಚಂದ್ರಘಾಟ್‌ನಲ್ಲಿ ಅಂತ್ಯಕ್ರಿಯೆ

ಬೆಂಗಳೂರು; ಬ್ಯಾಂಕಾಕ್‌ನಲ್ಲಿ ನಿನ್ನೆ ಹೃದಯಾಘಾತಕ್ಕೆ ಬಲಿಯಾದ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಅವರ ಪಾರ್ಥೀವ ಶರೀರವನ್ನು ಇಂದು ರಾತ್ರಿ ಬೆಂಗಳೂರಿಗೆ ಕರೆತರಲಾಗುತ್ತದೆ. ನಾಳೆ ಮಧ್ಯಾಹ್ನದವರೆಗೂ ಮಲ್ಲೇಶ್ವರಂನ ಬಿ.ಕೆ.ಶಿವರಾಮ್‌ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ನಂತರ ಹರಿಶ್ಚಂದ್ರಘಾಟ್‌ನಲ್ಲಿ ಸ್ಪಂದನಾ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.

ಬ್ಯಾಂಕಾಕ್‌ನ ಕಿಂಗ್‌ ಚುಲಾಳಾಂಗ್‌ಕಾರ್ನ್‌ ಮೆಮೊರಿಯಲ್‌ ಆಸ್ಪತ್ರೆಯಲ್ಲಿ ನಿನ್ನೆಯೇ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಇಂದು ಮಧ್ಯಾಹ್ನದ ಬಳಿಕ ಕಸ್ಟಮ್ಸ್‌ ಕ್ಲಿಯರೆನ್ಸ್‌ ಸಿಗಲಿದೆ. ಅನಂತರ ಮೃತದೇಹ ಸಂಬಂಧಿಕರಿಗೆ ಹಸ್ತಾಂತರವಾಗಲಿದೆ. ಸಂಜೆ ಏಳು ಗಂಟೆಗೆ ಸ್ಪಂದನಾ ಪಾರ್ಥೀವ ಶರೀರದಲ್ಲಿ ಬ್ಯಾಂಕಾಕ್‌ನಿಂದ ತರಲಾಗುತ್ತದೆ. ರಾತ್ರಿ 11 ಗಂಟೆ ವೇಳೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದ್ದು, ರಾತ್ರಿ 12 ಗಂಟೆ ಸುಮಾರಿಗೆ ಮಲ್ಲೇಶ್ವರಂ ನಿವಾಸಕ್ಕೆ ಸ್ಪಂದನಾ ಅವರ ಮೃತದೇಹವನ್ನು ಕರೆತರಲಾಗುತ್ತದೆ.

ಬ್ಯಾಂಕಾಕ್‌ನಲ್ಲಿ ವಿದೇಶಿ ವ್ಯಕ್ತಿ ಮೃತಪಟ್ಟರೆ ಮೊದಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಸಾವಿಗೆ ಕಾರಣ ತಿಳಿಯಲಾಗುತ್ತದೆ. ಅನಂತರ ಮೃತದೇಹವನ್ನು ಸಂಬಂಧಪಟ್ಟವರಿಗೆ ಹಸ್ತಾಂತರವಾಗುತ್ತದೆ. ಕುಟುಂಬದವರು ಸ್ವದೇಶಕ್ಕೆ ಮೃತದೇಹ ತರಬೇಕಾದರೆ, ಮರಣ ಪ್ರಮಾಣಪತ್ರ, ವೈದ್ಯಕೀಯ ವರದಿ ಹಾಗೂ ಪೊಲೀಸ್‌ ರಿಪೋರ್ಟ್‌ ಇರಬೇಕು. ಜೊತೆಗೆ ಮೃತರ ಪಾಸ್‌ಪೋರ್ಟ್‌ ಹಾಗೂ ವೀಸಾ ಕೂಡಾ ಇರಬೇಕು.

ಅಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಬೇಕು. ಅನಂತರ ಮೃತದೇಹ ರವಾನೆಗೆ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಬೇಕು. ಅನಂತರವೇ ಸ್ವದೇಶಕ್ಕೆ ಮೃತದೇಹ ರವಾನೆಗೆ ಅವಕಾಶ ಸಿಗುತ್ತದೆ. ಹೀಗಾಗಿ ಇಂದು ಸಂಜೆಯವರೆಗೂ ಈ ಪ್ರಕ್ರಿಯೆಗಳು ನಡೆಯಲಿವೆ.

Share Post