BengaluruCinemaHealth

ಸ್ನೇಹಿತರ ಜೊತೆ ಬ್ಯಾಂಕಾಕ್‌ಗೆ ಹೋಗಿದ್ದ ಸ್ಪಂದನಾ

ಬ್ಯಾಂಕಾಕ್‌; ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್‌ನಲ್ಲಿ ನಿಧನರಾಗಿರುವ ಕಹಿ ಸುದ್ದಿ ಇಂದು ಬೆಳಗ್ಗೆ ಬಂದಿತ್ತು. ಫ್ಯಾಮಿಲಿ ಜೊತೆ ಬ್ಯಾಂಕಾಕ್‌ಗೆ ಹೋಗಿದ್ದರು ಎಂದು ಮೊದಲಿಗೆ ಹೇಳಲಾಗಿತ್ತು. ಆದ್ರೆ ಸ್ಪಂದನಾ ಕಾಲೇಜು ಸ್ನೇಹಿತರ ಜೊತೆ ಬ್ಯಾಂಕಾಕ್‌ಗೆ ಹೋಗಿದ್ದರು ಅಂತ ತಿಳಿದುಬಂದಿದೆ.

ಮೂರು ದಿನಗಳ ಹಿಂದೆ ಕಾಲೇಜು ಸ್ನೇಹಿತರ ಜೊತೆಗೂಡಿ ಥಾಯ್ಲೆಂಡ್‌ ಪ್ರವಾಸಕ್ಕೆ ಹೋಗಿದ್ದರು. ನಿನ್ನೆ ಸಂಜೆ ಸ್ನೇಹಿತರ ಜೊತೆ ಸ್ಪಂದನಾ ಶಾಪಿಂಗ್‌ಗೆ ತೆರಳಿದ್ದರು. ನಂತರ ಮಲಗಿದ್ದ ಅವರು ಎದ್ದೇಳಿಲ್ಲ. ಅದನ್ನು ನೋಡಿ ಸ್ಪಂದನಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಷ್ಟೊತ್ತಿಗಾಗಲೇ ಸ್ಪಂದನಾ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.

ನಂತರ ವಿಜಯ ರಾಘವೇಂದ್ರ ಅವರು ಕೂಡಾ ಪತ್ನಿಯನ್ನು ಸೇರಿಕೊಂಡಿದ್ದರು. ಸದ್ಯ ವಿಜಯ ರಾಘವೇಂದ್ರ ಅವರು ಬ್ಯಾಂಕಾಕ್‌ನಲ್ಲೇ ಇದ್ದಾರೆ. ಇನ್ನು ಅವರ ಕುಟುಂಬದವರು ಬ್ಯಾಂಕಾಕ್‌ಗೆ ತೆರಳಲಿದ್ದಾರೆ. ನಾಳೆ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತದೆ ಎಂದು ತಿಳಿದುಬಂದಿದೆ.

 

Share Post