ಸಿದ್ದರಾಮಯ್ಯ ಬಯೋಪಿಕ್; ಪಾರ್ಟ್-1 ನಿರೂಪ್, ಪಾರ್ಟ್-2 ವಿಜಯ್ ಹೀರೋ..!
ಬೆಂಗಳೂರು; ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಬಯೋಪಿಕ್ ತೆಗೆಯುವ ಬಗ್ಗೆ ಈ ಹಿಂದೆಯೇ ಘೋಷಣೆಯಾಗಿತ್ತು. ಇದೀಗ ಚಿತ್ರತಂಡ ಎರಡು ಭಾಗಗಳಾಗಿ ಸಿದ್ದರಾಮಯ್ಯ ಬಯೋಪಿಕ್ ತೆಗೆಯಲು ಮುಂದಾಗಿದ್ದು, ಮೊದಲ ಭಾಗದಲ್ಲಿ ನಿರೂಪ್ ಬಂಡಾರಿಯನ್ನು ಹಾಗೂ ಎರಡನೇ ಭಾಗದಲ್ಲಿ ವಿಜಯ್ ಸೇತುಪತಿಯವರನ್ನು ಸಿದ್ದರಾಮಯ್ಯ ಅವರ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ಮಾಡಲು ತೀರ್ಮಾನಿಸಲಾಗಿದೆ. ಸಿದ್ದರಾಮಯ್ಯ ಯೌವನದಲ್ಲಿದ್ದಾಗ ಹೋರಾಟದ ಜೊತೆಗೆ, ವಕೀಲ ವೃತ್ತಿಯನ್ನು ಮಾಡುತ್ತಿದ್ದರು. ಈ ಕಥೆ ಮೊದಲ ಭಾಗದಲ್ಲಿ ಬರುತ್ತದೆ. ಇದಕ್ಕೆ ನಿರೂಪ್ ಬಂಡಾರಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಗಂಗಾವತಿ ಹಯಾತ್ ಪೀರ್ ಸಾಬ್ ಅವರ ನೇತೃತ್ವದ ಎಮ್ಎಸ್ ಕ್ರಿಯೇಷನ್ಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಶೀಘ್ರದಲ್ಲೇ ಈ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದು ಹೇಳಲಾಗುತ್ತಿದೆ.