Bengaluru

3 ವರ್ಷದಲ್ಲಿ ತಲೆ ಎತ್ತಲಿವೆ ಇನ್ನೂ 18 ಮೆಟ್ರೋ ಸ್ಟೇಷನ್‌ಗಳು; ಸುರಂಗ ಮಾರ್ಗದಲ್ಲಿ ಡಿಕೆಶಿ ಪರಿಶೀಲನೆ

ಬೆಂಗಳೂರು; 2025ರ ವೇಳೆ ಬೆಂಗಳೂರಿನಲ್ಲಿ ಇನ್ನೂ 18 ಮೆಟ್ರೋ ಸ್ಟೇಷನ್‌ಗಳು ತಲೆ ಎತ್ತಲಿವೆ. ಇದಕ್ಕಾಗಿ ಕಾಮಗಾರಿ ಭರದಿಂದ ಸಾಗಿದೆ. ಸುರಂಗ ಕಾಮಗಾರಿ ನಡೆಯುತ್ತಿದ್ದು, ಇಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸುರಂಗ ಮಾರ್ಗ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರಿನ ಲಕ್ಕಸಂದ್ರ ಸುರಂಗ ಮಾರ್ಗ, ಎಂಜಿ ರಸ್ತೆಯ ಸುರಂಗ ಮಾರ್ಗದ ಬಳಿ ನಡೆಯುತ್ತಿರುವ ಕಾಮಗಾರಿಯನ್ನು ಡಿ.ಕೆ.ಶಿವಕುಮಾರ್‌ ಪರಿಶೀಲನೆ ನಡೆಸಿದರು.

Share Post