ಮೊಸಳೆಯನ್ನು ಮದುವೆಯಾಗಿ ಚುಂಬಿಸಿದ ಮೆಕ್ಸಿಕನ್ ಮೇಯರ್
ದಕ್ಷಿಣ ಮೆಕ್ಸಿಕೋ; ದಕ್ಷಿಣ ಮೆಕ್ಸಿಕೋ ಪಟ್ಟಣದ ಮೇಯರ್ ಮೊಸಳೆಯನ್ನು ಮದುವೆಯಾಗಿದ್ದಾರೆ. ಅದೇ ಖುಷಿಯಲ್ಲಿ ಪತ್ನಿ ಮೊಸಳೆಗೆ ಮುತ್ತಿಕ್ಕಿ ಸಂಭ್ರಮಿಸಿದ್ದಾರೆ. ಇದೊಂದು ವಿಚಿತ್ರ ಘಟನೆಯಾದರೂ ಸತ್ಯ.
ಮೆಕ್ಸಿಕೋದ ಟೆಹುವಾಂಟೆಪೆಕ್ ಇಸ್ತಮಸ್‌ನಲ್ಲಿರುವ ಸ್ಯಾನ್ ಪೆಡ್ರೊ ಹುವಾಮೆಲುಲಾದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರೇ ಮೊಸಳೆಯನ್ನು ಮದುವೆಯಾದವರು. ಅಲಿಸಿಯಾ ಆಡ್ರಿಯಾನಾ ಹೆಸರಿನ ಮೊಸಳೆಯನ್ನೇ ಇವರು ಮದುವೆಯಾಗಿರೋದು. ಮೆಕ್ಸಿಕೋದ ಸಂಪ್ರದಾಯದಂತೆ ಮದುವೆಯನ್ನು ಅದ್ದೂರಿಯಾಗಿ ಮಾಡಲಾಗಿದೆ. ಇವರ ಪೂರ್ವಜರು ಕೂಡಾ ಇಂತಹ ಆಚರಣೆಗಳನ್ನು ಮಾಡುತ್ತಿದ್ದರು. ಹೀಗಾಗಿ ಮೇಯರ್ ಅದನ್ನು ಮುಂದುವರೆಸಿದ್ದಾರೆ.
ಮದುವೆಯ ನಂತರ ಮಾತನಾಡಿದ ವರ ಹಾಗೂ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ, ನಾವು ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದೇವೆ. ಮೊಸಳೆಯ ಜೊತೆ ಪ್ರೀತಿ ಇಲ್ಲದಿದ್ದರೆ ಮದುವೆಯಾಗೋದಕ್ಕೆ ಆಗೋದಿಲ್ಲ. ನಾನು ಈ ರಾಜಕುಮಾರಿಯನ್ನು ಇಷ್ಟಪಡುತ್ತಿದ್ದೇನೆ ಅಂತ ಸಂಭ್ರಮದಿಂದ ಹೇಳಿದ್ದಾನೆ.
ಇಲ್ಲಿನ ಎರಡು ಸ್ಥಳೀಯ ಜನಾಂಗಗಳು ಪುರುಷ ಮತ್ತು ಹೆಣ್ಣು ಸರೀಸೃಪದೊಂದಿಗೆ ವಿವಾಹ ಮಾಡುವ ಪದ್ಧತಿ ಆಚರಿಸಿಕೊಂಡು ಬಂದಿದೆ. ಆದ್ದರಿಂದ ಮೆಕ್ಸಿಕೋ ಮೇಯರ್ ಮೊಸಳೆಯನ್ನು ವರಿಸಿದ್ದಾರೆ. ಮದುವೆಗೂ ಮುನ್ನ ಮೊಸಳೆಯನ್ನು ಮನೆ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ನಿವಾಸಿಗಳು ಅದನ್ನು ಹಿಡಿದುಕೊಂಡು ನೃತ್ಯ ಮಾಡುತ್ತಾರೆ. ವಿವಾಹ ಸಂದರ್ಭದಲ್ಲಿ ಅದಕ್ಕೂ ಬಣ್ಣಬಣ್ಣದ ಬಟ್ಟೆ ತೊಡಿಸಿರುತ್ತಾರೆ.