ಶಿಫಾರಸು ಪತ್ರ ತಂದರೂ ಸಿಎಂ ಕಚೇರಿಯಲ್ಲಿ 30 ಲಕ್ಷ ದುಡ್ಡು ಕೇಳ್ತಾರೆ; ಹೆಚ್ಡಿಕೆ ಆರೋಪ
ಬೆಂಗಳೂರು; ಮುಖ್ಯಮಂತ್ರಿಗಳು ಕಚೇರಿಯ ಅಧಿಕಾರಿಗಳು ಶಾಸಕರಿಂದ 30 ಲಕ್ಷ ರೂಪಾಯಿ ಲಂಚ ಕೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿವರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಸಕರು ಮುಖ್ಯಮಂತ್ರಿಯವರಿಂದ ಶಿಫಾರಸು ತಂದರೂ ಹಣ ಕೇಳುತ್ತಿದ್ಧಾರೆ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳ ವರ್ಗಾವಣೆಗೆ ಶಾಸಕರು ಶಿಫಾರಸು ತಂದರೆ ಅದನ್ನು ಸಿಎಂ ಕಚೇರಿಯ ಅಧಿಕಾರಿಗಳು ಒಪ್ಪುತ್ತಿಲ್ಲ. ಶಿಫಾರಸು ಇದ್ದರೆ ಸಾಕಾಗೋದಿಲ್ಲ. 30 ಲಕ್ಷ ರೂಪಾಯಿ ಹಣ ತನ್ನಿ ಎಂದು ಹೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.