BengaluruEconomyNational

ಪ್ಯಾನ್‌ ಕಾರ್ಡ್‌ ಜೊತೆ ಆಧಾರ್‌ ಲಿಂಕ್‌ಗೆ ನಾಳೆಯೇ ಕೊನೇ ದಿನ

ಬೆಂಗಳೂರು; ಪ್ಯಾನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ ಮಾಡೋದಕ್ಕೆ ಗಡುವು ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ನಾಳೆಗೆ ಅಂದ್ರೆ ಶುಕ್ರವಾರಕ್ಕೆ ಗಡುವು ಅಂತ್ಯವಾಗಲಿದೆ. ಹೀಗಾಗಿ ಇಂದೇ ಲಿಂಕ್‌ ಮಾಡಿಸುವುದು ಒಳ್ಳೆಯದು. ಸಾವಿರ ರೂಪಾಯಿ ದಂಡದೊಂದಿಗೆ ಆಧಾರ್‌ ಹಾಗೂ ಪ್ಯಾನ್‌ ಲಿಂಕ್‌ ಮಾಡಬೇಕಾಗಿದೆ.

ಕಳೆದ ಮೂರು ತಿಂಗಳಿಂದ ಆದಾಯ ತೆರಿಗೆ ಇಲಾಖೆ ಹಲವು ಬಾರಿ ದಿನಾಂಕ ವಿಸ್ತರಣೆ ಮಾಡುತ್ತಾ ಬಂದಿತ್ತು. ಕೊನೆಯ ಬಾರಿ ಎಂಬಂತೆ ಜೂನ್‌ 30ರವರೆಗೆ ಅವಧಿ ವಿಸ್ತರಣೆ ಮಾಡಲಾಗಿತ್ತು. ಹೀಗಾಗಿ ಲಿಂಕ್‌ ಮಾಡಿಸಲು ನಾಳೆಯೇ ಕೊನೆಯ ದಿನ. ಲಿಂಕ್‌ ಮಾಡಿಸದೇ ಹೋದರೆ ಬ್ಯಾಂಕ್‌ಗಳಿಲ್ಲಿ ಅಕೌಂಟ್‌ಗಳು ಬಂದ್‌ ಆಗುತ್ತವೆ. ಪ್ಯಾನ್‌ ಕಾರ್ಡ್‌ ಕೂಡಾ ನಿಷ್ಕ್ರಿಯವಾಗಲಿದೆ.

Share Post