BengaluruPolitics

ಬಿಜೆಪಿಯದ್ದು ಮನೆಯೊಂದು ನೂರು ಬಾಗಿಲು; ಸಚಿವ ಎಂ.ಬಿ.ಪಾಟೀಲ್‌

ಬೆಂಗಳೂರು; ಸೋತ ಮೇಲೆ ರಾಜ್ಯದಲ್ಲಿ ಬಿಜೆಪಿ ಛಿದ್ರ ಛಿದ್ರವಾಗಿದೆ. ಬಿಜೆಪಿಯವರದ್ದು ಈಗ ಮನೆಯೊಂದು ನೂರು ಬಾಗಿಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಅಂತಿಮ ಘಟ್ಟಕ್ಕೆ ತಲುಪಿದೆ. ಅದು ಛಿದ್ರ ಛಿದ್ರವಾಗಿದೆ. ಎಷ್ಟೇ ಫಿವಿಕಾಲ್‌ ಹಾಕಿದರೂ ಅದನ್ನು ಅಂಟಿಸೋದಕ್ಕೆ ಆಗೋದಿಲ್ಲ. ಇದರ ಜೊತೆಗೆ ನಮ್ಮ ಗ್ಯಾರೆಂಟಿಗಳಿಂದ ಅವರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಉರಿದುಕೊಳ್ಳುತ್ತಿದ್ದಾರೆ. ಉರಿದುಕೊಳ್ಳುವವರು ಉರಿದುಕೊಳ್ಳಲಿ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

Share Post